ಕೊನೆಗೂ ರಿವೀಲ್ ಆಯಿತು ಯಶ್ ಮಗನ ಪೋಟೋ

ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಪುತ್ರನ ಹೇಗಿದ್ದಾನೆಂಬ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಧಿಕಾ ಮತ್ತು ಯಶ್ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರನ ಫೋಟೋ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.ನಿನ್ನೆಯೇ ರಾಧಿಕಾ ತಮ್ಮ ಪುತ್ರನ ಫೋಟೋ ರಿವೀಲ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮುದ್ದು ಮಗನ ಫೋಟೋ ಹಂಚಿಕೊಂಡಿದ್ದು ನಿಮ್ಮ ಆಶೀರ್ವಾದ, ಹಾರೈಕೆ ಈ ನಮ್ಮ ಮುದ್ದು ಮಗನ ಮೇಲೂ ಇರಲಿ ಎಂದಿದ್ದಾರೆ. ಪಕ್ಕಾ ಮಗಳು ಐರಾನಂತೇ ಕಾಣುವ ಯಶ್ ಪುತ್ರನಿಗೆ ಇಂದು ಆರು ತಿಂಗಳು ತುಂಬಿದೆ. ಆದರೆ ಇನ್ನೂ ಈ ಮಗುವಿನ ಹೆಸರು ನಿರ್ಧಾರವಾಗಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ನಾಸಾದ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಗೆ ಗೌರವ

Thu Apr 30 , 2020
ವಾಷಿಂಗ್ಟನ್: ಭಾರತೀಯ ಮೂಲದ ೧೭ ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ. ಅಮೆರಿಕದ ಅಲಬಾಮಾದ ನಾರ್ತ್ಪೋರ್ಟ್ನ ಪ್ರೌಢ ಶಾಲಾಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವನೀಜಾ ರೂಪಾನಿ, ನಾಸಾದ “ನೇಮ್ ದಿ ರೋವರ್” ಸ್ಪರ್ಧೆಯಲ್ಲಿ ತನ್ನ ಪ್ರಬಂಧವನ್ನು ಸಲ್ಲಿಸಿದ್ದರು. ಇದೀಗ ನಾಸಾ ರೂಪಾನಿ ಸೂಚಿಸಿದ್ದ ಹೆಸರನ್ನೇ ಇಟ್ಟಿದೆ. ಮತ್ತೊಂದು ಗ್ರಹದಲ್ಲಿ ಹಾರಾಟವನ್ನು ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ನಾಸಾದ ಮಾರ್ಸ್ ಹೆಲಿಕಾಪ್ಟರ್ ಪಾತ್ರವಾಗಲಿದ್ದು ಇದಕ್ಕೆ […]

Advertisement

Wordpress Social Share Plugin powered by Ultimatelysocial