ITI ಕಾಲೇಜ ಮತ್ತು ಇಂಜಿನೀಯರಿಂಗ್ ಕಾಲೇಜಿನಲ್ಲಿ EVM ಮತ್ತು VV Pad ಬಗ್ಗೆ ಪ್ರಾತ್ಯಕ್ಷತೆ ಕಾರ್ಯಕ್ರಮ.

 

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಐಟಿಐ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿ.ವಿ.ಪ್ಯಾಡ್ ಮತ್ತು ಇವಿ.ಎಮ್ ಮಶೀನ್ ಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ನಿರ್ದೇಶಕರಾದ ವೆಂಕಟೇಶ್ ವಂದಾಲ್ ಸರ್ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಲೇಜು ವಿಧ್ಯಾರ್ಥಿಗಳು ಪ್ರಥಮ ಬಾರಿಗೆ ಮತದಾನದಲ್ಲಿ ಪಾಲ್ಗೋಳ್ಳುತ್ತಾರೆ. ತಮ್ಮ ಅಮೂಲ್ಯವಾದ ಮತ್ತವನ್ನು ಪ್ರಜ್ಞಾವಂತಿಕೆಯಿಂದ ಚಲಾವಣೆ ಮಾಡಬೇಕು ಎಂದರು.ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಣ್ಣ ದೊಡ್ಮನಿ ಸರ್ ಮಾತನಾಡಿ ಎಲ್ಲಾ ವಿಧ್ಯಾರ್ತಿಗಳು ಮತದಾನ ಮಾಡಬೇಕೆಂದರೆ ಎಲ್ಲರೂ ಕಡ್ಡಾಯವಾಗಿ ಚುನಾವಣೆ ಗುರುತಿನ ಚೀಟಿ ಹೊಂದಬೇಕು ಅದಕ್ಕಾಗಿ ಎಲ್ಲರೂ Voter helpline ಯ್ಯಾಪ್ ಬಳಸಿ ಮತದಾರರ ಗುರುತಿನ ಚೀಟಿ ಹೊಂದಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಪಿಡಿಓ ಆನಂದ್ ಮತ್ತು ಕಾರ್ಯದರ್ಶಿಗಳಾದ ಆದಿಬಸಯ್ಯ ಹಿರೇಮಠ ಐಟಿಐ ಕಾಲೇಜಿನ ಪ್ರಿನ್ಸಿಪಾಲ್ರಾದ ನಂದರಾಜ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಿಂಗನಗೌಡ ಶಿಕ್ಷಕರು ಅಶೋಕ ವೆಂಕಣ್ಣ ಕೊಟ್ರಪ್ಪ ಶಿಕ್ಷಕರು ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲರು, ಬಾನಾಪೂರ ಗ್ರಾಮ ಪಂಚಾಯತಿಯ ಪಿ.ಡಿ.ಓ ಅಡಿವೆಪ್ಪ ನವರು ತಾಲೂಕ ಐ.ಇ.ಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ತಳಕಲ್ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಶಾಲಾ ಮತ್ತು ಕಾಲೇಜು ವಿಧ್ಯಾರ್ತಿಗಳು ಗಳು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಗೂಲಿ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿಲ್ಲ ರಣಬೀರ್.

Tue Feb 28 , 2023
  ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.ಸೌರವ್ ಗಂಗೂಲಿ ಜತೆ ರಣಬೀರ್ ಕಪೂರ್ ಕ್ರಿಕೆಟ್ ಆಡಿದ ಫೋಟೋಗಳು ವೈರಲ್ ಆಗಿವೆ. ಹಾಗಾಗಿ ಸೌರವ್ ಗಂಗೂಲಿ ಬಯೋಪಿಕ್‌ನಲ್ಲಿ ರಣಬೀರ್ ಕಪೂರ್ ನಟಿಸಬಹುದೇ ಎಂಬ ಅನುಮಾನ ಮೂಡಿತ್ತು. ಆ ರೀತಿಯ ಯಾವುದೇ ಆಫರ್ ಬಂದಿಲ್ಲ ಎಂದು ರಣಬೀರ್ ಕಪೂರ್ ಸ್ಪಷ್ಟಪಡಿಸಿದ್ಧಾರೆ. ರಣಬೀರ್ ಕಪೂರ್ ಅಭಿನಯದ ‘ತು ಜೂಟಿ ಮೈ […]

Advertisement

Wordpress Social Share Plugin powered by Ultimatelysocial