ಕೊರೊನಾ ಎಫೆಕ್ಟ್ ಗರ್ಭಿಣಿರ ಸಂಖ್ಯೆ ಏರಿಕೆ

ಮಹಾಮಾರಿ ಕೊರೊನಾ ವಿರುದ್ಧ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್‌ಡೌನ್ ಆದೇಶ ಮಾಡಿರುವ ಕಾರಣ ಅಗತ್ಯ ವಸ್ತು ಪಡೆದುಕೊಳ್ಳಲು ಜನರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ವಿಶ್ವಸಂಸ್ಥೆ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ. ೧೧೪ ದೇಶದ ೪೫೦ ಮಿಲಿಯನ್‌ಗೂ ಅಧಿಕ ಮಧ್ಯಮ ವರ್ಗದ ಮಹಿಳೆಯರು ಲಾಕ್‌ಡೌನ್ ವೇಳೆ ಗರ್ಭನಿರೋಧಕ ಬಳಕೆ ಮಾಡಲು ಆಗದ ಕಾರಣ ಗರ್ಭಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅದರಲ್ಲಿ ೭೦ ಲಕ್ಷ ಮಹಿಳೆಯರು ಮುಂದಿನ ತಿಂಗಳಲ್ಲಿ ಗರ್ಭಧರಿಸಲಿದ್ದಾರೆ ಎಂದು ತಿಳಿಸಿದೆ.ಲಾಕ್‌ಡೌನ್ ಹೇರಿಕೆ ಮಾಡಿರುವ ಕಾರಣ, ಗರ್ಭನಿರೋಧಕಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ಸುಲಭವಾಗಿ ಅದು ಈ ವೇಳೆ ಲಭ್ಯವಾಗುತ್ತಿಲ್ಲವಾದ್ದರಿಂದ ಮಹಿಳೆಯರು ಗರ್ಭಿಣಿಯರಾಗಿದ್ದಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ದತ್ತಾಂಶ ಬಿಡುಗಡೆ ಮಾಡಿದೆ.ವಿಶ್ವದಲ್ಲಿ ಜನಸಂಖ್ಯೆ ಮತ್ತಷ್ಟು ಏರಿಕೆಯಾಗಲು ಇದೂ ಒಂದು ರೀತಿಯಲ್ಲಿ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ತಿಳಿಸಿದ್ದು, ದೇಶದ ಆರ್ಥಿಕತೆ ಮತ್ತಷ್ಟು ಉಲ್ಭಣಗೊಳ್ಳಲಿದೆ ಎಂದಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಹೇರಿಕೆ ಮಾಡಿರುವ ಕಾರಣ ಗರ್ಭನಿರೋಧಕಗಳ ರಫ್ತಿನಲ್ಲಿ ವ್ಯತ್ಯಯವಾಗಿದ್ದು, ಸುಲಭವಾಗಿ ಜನರ ಕೈಗೆ ಸಿಗುತ್ತಿಲ್ಲವಾಗಿರುವುದೇ ಇದಕ್ಕೆ ಕಾರಣವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮೇ .3 ರ ಬಳಿಕ ಕೈಗಾರಿಕೆಗಳು ಓಪನ್ ..!

Thu Apr 30 , 2020
ಕೊರೊನಾ ರೋಗದಿಂದ ಗುಣಮುಖರಾದವರ ಬಗ್ಗೆ ಕೊರೊನಾ ವಾರಿಯರ್ಸ್ ಬಗ್ಗೆ ಸಕಾರಾತ್ಮಕ ವಿಷಯಗಳನ್ನು ಬಿತ್ತರಿಸಿರು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗಿವೆ. ಇದು ಹೀಗೆ ಮುಂದುವರೆದರೆ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲೂ ಕೈಗಾರಿಕೆ ಕಾರ್ಯ ನಿರ್ವಹಿಸುವ ಸಂಬಂಧ ನಿರ್ಧಾರ ಕೈಗೊಳ್ಳಬಹುದು . ಇದೇ ವೇಳೆ, ಮಾಧ್ಯಮಗಳ ಕಾರ್ಯಕ್ಕೆ ಸಿಎಂ ಧನ್ಯವಾದ ಸಲ್ಲಿಸಿದರು ಅಲ್ಲದೇ, ವಿಷಮ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಸೇವೆಯನ್ನು […]

Advertisement

Wordpress Social Share Plugin powered by Ultimatelysocial