ಕೊರೊನಾ ಯೋಧರಿಗೆ ಸೇನೆಯಿಂದ ಗೌರವ

ನವದೆಹಲಿ: ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ತೊಡಗಿರುವ ದೇಶದ ಆರೋಗ್ಯ ಕಾರ್ಯಕರ್ತರ ಕೆಲಸ ಶಾಘಿಸಿ ಕೃತಜ್ಞತೆ ಸಲ್ಲಿಸುವಲ್ಲಿ ಸಶಸ್ತç ಪಡೆಗಳು ತಮ್ಮದೇ ಆದ ಸಾಂಪ್ರಾದಾಯಿಕ ಶೈಲಿಯಲ್ಲಿ ಹಲವು ವಿಶೇಷ ಚಟುವಟಿಕೆಗಳನ್ನು ನಡೆಸಿದವು. ಕಳೆದೆರಡು ತಿಂಗಳಿಂದ ಹಗಲಿರುಳೆನ್ನದೆ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು ಸೇರಿದಂತೆ ಅಸಂಖ್ಯಾತ ಸ್ವಯಂ ಸೇವಕರೂ ಕುಟುಂಬ, ಸಂಸಾರದಿAದ ದೂರ ಉಳಿದು ಕರೊನಾ ವಿರುದ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ತ್ಯಾಗ ಹಾಗೂ ಕಠಿಣ ಶ್ರಮದಿಂದ ಸೇವೆ ಸಲ್ಲಿಸುತ್ತಿರುವ ಇವರೆಲ್ಲರೂ ಅತ್ಯುನ್ನತ ಗೌರವಕ್ಕೆ ಅರ್ಹರಾಗಿರುತ್ತಾರೆ. ಗಡಿ ಕಾಯುವ ಸೈನಿಕರಂತೆಯೇ ಇವರೂ ರಾಷ್ಟç ರಕ್ಷಣೆಯಲ್ಲಿ ಅತ್ಯುನ್ನತ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಸೇನಾ ಪಡೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಅಪ್ರತಿಮ ಯೋಧರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಗುಟ್ಕಾ-ಸಿಗರೇಟಿಗಾಗಿ ಹಾಹಾಕಾರ

Sun May 3 , 2020
ಲಾಕ್‌ಡೌನ್ ಆಗಿ ನಲವತ್ತು ದಿನಗಳೇ ಕಳೆದಿದೆ, ನಶೆಯ ಸಾಮಾಗ್ರಿಗಳಿಲ್ಲದೆ, ನಾಲಿಗೆ ಸತ್ತುಬಿದ್ದಿದೆ. ತುಟಿಗಳು ಚುಟುಚುಟು ಅಂತಿದೆ. ಇನ್ನಾಗೊಲ್ಲಾ ಕಣ್ರಿ ಅಂತಿದ್ದಾರೆ ಹಲವು ಜನ. ಇದಕ್ಕೆ ಸಾಕ್ಷಿ ಗುಜರಾತ್‌ನ ಸುರೇಂದ್ರ ನಗರ ತಾಲೂಕಿನಲ್ಲಿ ನಡೆದ ಘಟನೆ. ಬಿಡಿ,ಸಿಗರೇಟು,ಗುಟ್ಕಾ,ಪಾನ್ ಇಲ್ಲದೇನೆ ದಿನಗಳೇ ಹೋಗುತ್ತಿಲ್ಲ. ಇಂತವರ ಆಸೆ ಪೂರೈಸಲು ಇಲ್ಲಿನ ಸುದಾಮ್ದಾ ನಗರದಲ್ಲಿ ಬೀಡಾ ಅಂಗಡಿಯೊAದನ್ನು ಅದರ ಮಾಲೀಕನೊಬ್ಬ ತೆರೆದಿದ್ದ. ಲಾಕ್‌ಡೌನ್ ನಡುವೆ ಅಂಗಡಿ ಓಪನ್ ಮಾಡುವಂತಿಲ್ಲ. ಆದಾಗ್ಯೂ ಶಾಪ್ ಓಪನ್ ಮಾಡಿದ್ದರ ಪರಿಣಾಮ […]

Advertisement

Wordpress Social Share Plugin powered by Ultimatelysocial