ಕೊರೋನಾ ಪೀಡಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ..!

ಕೊರೋನಾ ಪೀಡಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮತಿ ನೀಡಿದ್ದು, ರಾಜ್ಯದಲ್ಲಿ ಈ ಮಾದರಿಯ ಚಿಕಿತ್ಸೆ ಮುಂದುವರೆಸಬಹುದು ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರೋನಾದಿಂದ ಗುಣಮುಖರಾದ ವ್ಯಕ್ತಿಯ ದೇಹದಿಂದ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುವ ರಕ್ತದ ಕಣಗಳನ್ನು ರೋಗ ಪೀಡಿತ ವ್ಯಕ್ತಿಗೆ ನೀಡುವ ಮೂಲಕ ಆತನನ್ನೂ ಈ ಕಾಯಿಲೆಯಿಂದ ಗುಣಪಡಿಸಬಹುದು. ಡಾ. ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಐಸಿಎಂಆರ್‌ ಈಗಾಗಲೇ ಅನುಮತಿ ನೀಡಿದೆ. ಈ ಚಿಕಿತ್ಸೆ ಫಲಕಾರಿಯಾದರೆ ಕೊರೋನಾದಿಂದ ಗುಣಮುಖರಾದವರಿಂದ ಕನಿಷ್ಠ ಇಬ್ಬರು ಮೂವರು ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಮಾಡಬಹುದು. ರಾಜ್ಯದಲ್ಲಿ ಈಗಾಗಲೇ 129 ಜನ ಕೊರೋನಾದಿಂದ ಗುಣಮುಖರಾಗಿದ್ದು, ಇವರ ಮೂಲಕ ರೋಗ ಪೀಡಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಬಹುದು’ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಗಾರ್ಮೆಂಟ್ಸ್ ನೌಕರರಿಗೆ ವೇತನ ನೀಡದ ಮಾಲೀಕರು

Wed Apr 22 , 2020
ಇತ್ತೀಚಿಗೆ ಕೆಲ ಗಾರ್ಮೆಂಟ್ಸ್ ಕಾರ್ಖಾನೆಗಳ ಆಡಳಿತ ವರ್ಗ, ಕಾರ್ಮಿಕರನ್ನು ಜೀತದಾಳುಗಳಂತೆ ಕಾಣುತ್ತಿದ್ದಾರೆಯೇ ಎಂಬ ಅನುಮಾನ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ಲಾಕ್ ಡೌನ್ ಹಿನ್ನಲೆ, ಹುಳಿಮಾವಿನಲ್ಲಿರುವ ಲೀಸ್ ಅಪ್ರೇಸೆಲ್ಸ್ ಗಾರ್ಮೆಂಟ್ಸ್ ನ ಮಾಲೀಕ ಸುಬ್ರಮಣ್ಯ, ಹಲವು ದಿನಗಳಿಂದ ಸ್ಯಾಲರಿ ಕೊಡದೇ ನೌಕರರನ್ನು ಪೀಡುಸುತ್ತಿದ್ದಾನೆ. ಇದರಿಂದ ಬೇಸತ್ತ ನೌಕರರು. ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಎಷ್ಟೋ ಸಂಸ್ಥೆಗಳು ಮೂಲ ವೇತನಕ್ಕಿಂತ ಕಡಿಮೆ ವೇತನವನ್ನು ನೀಡುತ್ತಿದೆ. ವರ್ಷಕ್ಕೆ ಕೊಡಬೇಕಾದ ಬೋನಸ್ ಗಳನ್ನು ಸಹ ನೀಡದೆ, […]

Advertisement

Wordpress Social Share Plugin powered by Ultimatelysocial