ಕೋವಿಡ್ ೧೯ ಸೋಂಕಿನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದೆ. ದಿನಪ್ರತಿ ಸೋಂಕಿತರ ಸಂಖ್ಯೆ, ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಈ ಭಯ ಸ್ಯಾಂಡಲ್ವುಡ್ ಮಂದಿಯನ್ನೂ ಬಿಟ್ಟಿಲ್ಲ. ಕೆಲ ದಿನಗಳ ಹಿಂದಷ್ಟೇ ಸಂಸದೆ ಸುಮಲತಾ ಅವರಿಗೆ ಕೋವಿಡ್ ೧೯ ಪಾಸಿಟಿವ್ ಬಂದಿದ್ದು, ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಕೂಡ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣನಿಗೂ ಕೋವಿಡ್ ೧೯ ಆತಂಕ ಶುರುವಾಗಿದೆ. ಹೌದು..! ದೊಡ್ಡಣ್ಣ ಸಹ ಸುಮಲತಾ, ಹಾಗೂ ರಾಕ್ಲೈನ್ ವೆಂಕಟೇಶ್ ಸಂಪರ್ಕದಲ್ಲಿದ್ದು, ಈ ಹಿಂದೆ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಅವರು ಸ್ವಯಂ ಪ್ರೇರಿತರಾಗಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ಕಲಾವಿದರ ಸಂಘದ ಖಜಾಂಚಿಯಾಗಿರುವುದರಿAದ ಮನೆಯಿಂದಲೇ ಸಂಘದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಕೋವಿಡ್-೧೯ ಆತಂಕದಿAದ ನಟ ದೊಡ್ಡಣ್ಣ ಹೋಮ್ ಕ್ವಾರಂಟೈನ್
Please follow and like us: