ಆಮೆಯ ಬಗ್ಗೆ ಸಾಮಾನ್ಯವಾಗಿ ಒಂದು ಕಲ್ಪನೆ ಇದೆ, ಸಾವಧಾನವಾಗಿ ಚಲಿಸುವ ಪ್ರಾಣಿ ಎಂಬುದು ಜನಜನಿತ. ಆದರೆ ಇತ್ತೀಚೆಗೆ ವೈರಲ್ ಆದ ಸುದ್ದಿ ಅಚ್ಚರಿ ಹುಟ್ಟಿಸುವಂತಿದೆ. ಲ್ಯಾಟೊನ್ಯಾ ಎಂಬಾಕೆ ತನ್ನ ಸಹೋದರ ಕೆವಿನ್ ನೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಮುಂಭಾಗದ ಗ್ಲಾಸ್ ಗೆ ವಸ್ತುವೊಂದು ಬಡಿದಿದೆ. ಬಡಿದ ರಭಸಕ್ಕೆ ಗ್ಲಾಸ್ ಒಡೆದಿದೆ. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ಅದು ಕಲ್ಲು ಅಥವ ಯಾವುದೇ ಗಟ್ಟಿ ಪದಾರ್ಥವಾಗಿರಲಿಲ್ಲ. ಬದಲಿಗೆ ಆಮೆ ಅಲ್ಲಿ ಕಂಡಿತ್ತು. ಈ ಘಟನೆ ವೇಳೆ ಅವರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಈ ವಿವರಗಳನ್ನು ಅವರು ಫೇಸ್ ಬುಕ್ ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ. ಕೆಲ ದಿನಗಳ ನಂತರ ಆಮೆ ರಕ್ತಸ್ರಾವದಿಂದ ಸತ್ತು ಹೋಗಿದೆ. ಆಮೆ ಯಾವ ರೂಪದಲ್ಲಿ ಕಾರಿನ ಮೇಲೆ ಅಪ್ಪಳಿಸಿತು? ಅಷ್ಟು ಎತ್ತರಕ್ಕೆ ಜಿಗಿದಿದ್ದಾದರು ಹೇಗೆ? ಎದುರಿನ ಗಾಜು ಪುಡಿಯಾಗುವಂತೆ ಅಷ್ಟೊಂದು ವೇಗ ಬಂದಿದ್ದಾದರೂ ಹೇಗೆ? ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಗಾಜು ಪುಡಿಗುಟ್ಟಿಸುವ ಶಕ್ತಿ ಇದೆಯಾ.. ಸಾವಧಾನ ಆಮೆಗೆ

Please follow and like us: