ಗಿನ್ನಿಸ್ ದಾಖಲೆ ಬರೆದ ಕೊತ್ತಂಬರಿ ಗಿಡ

ರಾಣಿಖೇತ್: ಸಾಮಾನ್ಯವಾಗಿ ಕೊತ್ತಂಬರಿ ಗಿಡ ಒಂದರಿಂದ ಮೂರು ಅಡಿ ಎತ್ತರ ಬೆಳೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ 7 ಅಡಿ ಉದ್ದ ( 2.16 ಮೀಟರ್​) ಕೊತ್ತಂಬರಿ ಗಿಡ ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾನೆ. ಉತ್ತರಾಖಂಡದ ರಾಣಿಖೇತ್​ನ ರೈತ ಗೋಪಾಲ್​ ದತ್​​ ಈ ಸಾಧನೆ ಮಾಡಿರುವ ಪ್ರಗತಿಪರ ರೈತ. ಸಾವಯವ ಕೃಷಿ ಪದ್ಧತಿ ಮೂಲಕ 2.16 ಮೀಟರ್​ ಉದ್ಧವಾದ ಕೊತ್ತಂಬರಿ ಗಿಡ ಬೆಳೆಸಿದ್ದು, ಗಿನ್ನಿಸ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​​ನಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಎತ್ತರವಾಗಿ ಬೆಳೆದ ಕೊತ್ತಂಬರಿ ಗಿಡ ಎಂಬುದು ಗಮನಾರ್ಹ ಸಂಗತಿಯಾಗಿದೆ. ರೈತನ ಸಾಧನೆಯನ್ನ ಸಂಸದರಾಗಿರುವ ಅಜಯ್​ ಭಟ್​ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ. ಈ ಕೊತ್ತಂಬರಿ ಕಾಂಡದ ದಪ್ಪ ಅರ್ಧ ಇಂಚಿನಿಂದ 1 ಇಂಚಿನವರೆಗೆ ಇದೆ.

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ತಂತಿಯ ಮೇಲೆ ಓಡಾಡಿದ ಭೂಪ

Fri Jun 5 , 2020
ಡರ್ ಕೆ ಆಗೆ ಜೀತ್ ಹೆ ಎಂಬುದು ಜಾಹೀರಾತೊಂದರ‌ ಅತಿ ಪ್ರಸಿದ್ಧ ಸಾಲು. ಸಾಮಾನ್ಯರು ಮಾಡಲು ಅಸಾಧ್ಯ ಎನಿಸುವ ಕಾರ್ಯಗಳನ್ನು ಕೆಲವರು ಮಾಡಿ ಸಾಹಸಿಗರು ಎನಿಸುತ್ತಾರೆ.‌ ತೆಲಂಗಾಣದಿಂದ ಟ್ವಿಟರ್ ನಲ್ಲಿ ಅಪ್ ಲೋಡ್ ಆದ ಅಪರೂಪ, ಅಪಾಯಕಾರಿ ಸಾಹಸದ‌ ವಿಡಿಯೋ ಒಂದು ನೆಟ್ಟಿಗರನ್ನು ತಲ್ಲಣಗೊಳಿಸಿದೆ. ತೆಲಂಗಾಣದ ನಿಜಾಂಪುರದಲ್ಲಿ ಘಟನೆ ನಡೆದಿದ್ದು, ನೂರ್ ಸಾವನ್ನೇ ಹೆದರಿಸಿ ಸಾಹಸ ಮಾಡಿದ ಭೂಪ.‌ ಅರ್ಷದ್ ಎಂಬವರು ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.ವಿದ್ಯುತ್ […]

Advertisement

Wordpress Social Share Plugin powered by Ultimatelysocial