ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಯುಎಇ ಭೇಟಿ…

 

ಅಬುಧಾಬಿ (ಯುಎಇ), ಮೇ 17 – ಅಮೆರಿಕ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರು ಉನ್ನತ ನಿಯೋಗದೊಂದಿಗೆ ಯುಎಇ ಗೆ ಬಂದಿಳಿದಿದ್ದಾರೆ.
ತೈಲ ಸಮೃದ್ಧ ಅಬುಧಾಬಿಗೆ ಅಮೆರಿಕದ ಅತ್ಯುನ್ನತ ಮಟ್ಟದ ಭೇಟಿ ಇದಾಗಿದ್ದು ,ಉಕ್ರೇನ್-ರಷ್ಯಾಯುದ್ಧದಿಂದ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸಂಬಂಧಗಳನ್ನು ಸರಿಪಡಿಸಲು ಪ್ರಯತ್ನದ ಸೂಚಕವಾಗಿದೆ ಎಂಬುವದು ಹೇಳಲಾಗಿದೆ.

ಯುಎಇಯ ಪ್ರಬಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಶೇಖ್ ತಹ್ನೂನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹ್ಯಾರಿಸ್ ಅವರನ್ನು ಸ್ವಾಗತಿಸಿದರು. ನಿಯೋಗದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಸಿಐಎ ನಿರ್ದೇಶಕ ವಿಲಿಯಂ ಬನ್ಸರ್ ಮತ್ತು ಹವಾಮಾನ ರಾಯಭಾರಿ ಜಾನ್ ಕೆರಿ ಸಹ ಸೇರಿದ್ದಾರೆ.

ಯುಎಇ ಹೊಸ ಅಧ್ಯಕ್ಷರಾಗಿ ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನುಬೇಟಿ ಮಾಡಿ ಅಭಿನಂದಿಸಲಿದ್ದಾರೆ. ಇದೇ ವೇಳೆ ಇತ್ತೀಚೆಗೆ ನಿಧನರಾದ ಶೇಖ್ ಖಲೀಫಾ ಅವರಿಗೆ ಶ್ರದ್ದಾಂಜಲಿ ಸಲಿಸಿದ್ದಾರೆ. ಅಮೆರಿಕ-ಯುಎಇ ನಡುವೆ ಉತ್ತಮ ಬಾಂಧವ್ಯ ಎದುರು ನೋಡುತ್ತಿರುವುದ್ದಾಗಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೊ ಬಿಡನ್ ಅವರ ಪರವಾಗಿ ನಾನು ಇಲ್ಲಿಗೆ ಬಂದಿದ್ದು, ಪ್ರಸ್ತುತ ಪಾಶ್ಚಿಮಾತ್ಯ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನಕ್ಕೆ ಕೈಜೊಡಿಸುವುದು ಸಂವೃದ್ದ ಪರಿಸರ ನಿರ್ಮಾಣದತ್ತ ನಮ್ಮ ಪ್ರಯತ್ನ ಎಂದು ಸುದ್ದಿಗಾರರಿಗೆ ತಿಳಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐದು ಬಡ ಕುಟುಂಬಗಳು 46 ವರ್ಷಗಳ ಭೂ ವ್ಯಾಜ್ಯ ಗೆದ್ದ ಕಥೆ..!

Tue May 17 , 2022
ಬೆಂಗಳೂರು ಮೇ 17. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐದು ಬಡ ಕುಟುಂಬಗಳು ತಮ್ಮಗೆ ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ಪಡೆಯಲು 46 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಕೊನೆಗೂ ಹೈಕೋರ್ಟ್ ನಲ್ಲಿ ಗೆಲುವು ಸಾಧಿಸಿದ ಕಥೆ. ಪ್ರಕರಣದ ಪೂರ್ವಾಪರಗಳನ್ನು ಗಮನಿಸಿದ ಹೈಕೋರ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಐದು ಬಡ ಕುಟುಂಬಗಳ ರಕ್ಷಣೆಗಾಗಿ ಧಾವಿಸಿರುವುದೇ ಅಲ್ಲದೆ, ಸುಮಾರು 50 ವರ್ಷಗಳ ಹಿಂದೆ ಮಂಜೂರು ಮಾಡಿದ ಭೂಮಿಯನ್ನು […]

Advertisement

Wordpress Social Share Plugin powered by Ultimatelysocial