ಮಗನ ಆಸೆ ಈಡೇರಿಸಲು 4 ಚಕ್ರದ ವಾಹನ ತಯಾರಿಸಿದ ತಂದೆ: ಆನಂದ್ ಮಹೀಂದ್ರಾ ಮೆಚ್ಚುಗೆ ̤̤̤

ಮುಂಬೈ: ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ಸ್ಕ್ರ್ಯಾಪ್ ಮೆಟಲ್ ಬಳಸಿ ತಯಾರಿಸಿದ ನಾಲ್ಕು ಚಕ್ರದ ವಾಹನವೀಗ ಆನಂದ್‌ ಮಹೀಂದ್ರ ಅವರನ್ನು ಬೆರಗಾಗುವಂತೆ ಮಾಡಿದೆ.

ಈ ವಾಹನವನ್ನು ಕೇವಲ ₹60,000 ಗಳಲ್ಲಿ ತಯಾರಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿರುವಂತೆ ಈ ನಾಲ್ಕು ಚಕ್ರದ ವಾಹನದಲ್ಲಿಯೂ ಕಿಕ್‌-ಸ್ಟಾರ್ಟ್‌ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.

ಈ ವಾಹನ ಮತ್ತು ಅದರ ತಯಾರಕ ದತ್ತಾತ್ರೇಯ ಲೋಹರ್ ಅವರನ್ನು ಒಳಗೊಂಡಿರುವ 45 ಸೆಕೆಂಡ್‌ಗಳ ವಿಡಿಯೊ ಕ್ಲಿಪ್ ಅನ್ನು ಆನಂದ್‌ ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂಬುದಾಗಿ ಆನಂದ್‌ ಮಹೀಂದ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲೋಹರ್ ಅವರಿಗೆ ಬೊಲೆರೊ ವಾಹನವನ್ನು ನೀಡುವುದಾಗಿಯೂ ಮಹೀಂದ್ರಾ ತಿಳಿಸಿದ್ದಾರೆ.

ದತ್ತಾತ್ರೇಯ ಲೋಹರ್ ಅವರು ತಮ್ಮ ಮಗನ ಆಸೆಯನ್ನು ಈಡೇರಿಸಲು ಈ ವಾಹನವನ್ನು ತಯಾರಿಸಿದ್ದಾರೆ. ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ಕಮ್ಮಾರರ ಕುಟುಂಬಕ್ಕೆ ಲೋಹರ್ ಸೇರಿದವರು ಎಂದು ಯೂಟ್ಯೂಬ್ ಚಾನೆಲ್ ‘ಹಿಸ್ಟೋರಿಕಾನೊ’ ವರದಿ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐರಾಗೆ ಕನ್ನಡ ವರ್ಣಮಾಲೆ ಹೇಳಿಕೊಟ್ಟ ಯಶ್.|Rocking Star Yash|

Sun Jan 23 , 2022
ಬೆಂಗಳೂರು: ನಟ ರಾಕಿಂಗ್ ಸ್ಟಾರ್‌ ಯಶ್‌ ಅವರು ಸಿನಿಮಾ ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದಿದ್ದು, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಸದ್ಯ ವೀಕೆಂಡ್‌ ಮೂಡ್‌ನಲ್ಲಿರುವ ಯಶ್, ಮಗಳು ಐರಾಗೆ ಸ್ಪೆಷಲ್​ ಕ್ಲಾಸ್​ ಕೇಳಿಕೊಡುತ್ತಿರುವ ವಿಡಿಯೊವನ್ನು ಅವರ ಪತ್ನಿ ರಾಧಿಕಾ ಪಂಡಿತ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿದೆ. ಯಶ್​ ಅವರು ಐರಾಳಿಗೆ ಕನ್ನಡ ವರ್ಣಮಾಲೆ ಹೇಳಿಕೊಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ […]

Advertisement

Wordpress Social Share Plugin powered by Ultimatelysocial