ಐರಾಗೆ ಕನ್ನಡ ವರ್ಣಮಾಲೆ ಹೇಳಿಕೊಟ್ಟ ಯಶ್.|Rocking Star Yash|

ಬೆಂಗಳೂರು: ನಟ ರಾಕಿಂಗ್ ಸ್ಟಾರ್‌ ಯಶ್‌ ಅವರು ಸಿನಿಮಾ ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದಿದ್ದು, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.

ಸದ್ಯ ವೀಕೆಂಡ್‌ ಮೂಡ್‌ನಲ್ಲಿರುವ ಯಶ್, ಮಗಳು ಐರಾಗೆ ಸ್ಪೆಷಲ್​ ಕ್ಲಾಸ್​ ಕೇಳಿಕೊಡುತ್ತಿರುವ ವಿಡಿಯೊವನ್ನು ಅವರ ಪತ್ನಿ ರಾಧಿಕಾ ಪಂಡಿತ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿದೆ.

ಯಶ್​ ಅವರು ಐರಾಳಿಗೆ ಕನ್ನಡ ವರ್ಣಮಾಲೆ ಹೇಳಿಕೊಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 4.24 ಲಕ್ಷ ಮಂದಿ ಇಷ್ಟಪಟ್ಟಿದ್ದಾರೆ. ವಿಡಿಯೊ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ಐರಾ ಕ್ಯೂಟ್‌ ಆಗಿದ್ದಾಳೆ, ಐರಾಳನ್ನು ವಿದ್ಯಾರ್ಥಿನಿಯಾಗಿ ನೋಡಲು ಖುಷಿಯಾಗುತ್ತಿದೆ ಎಂದು ಬಗೆಬಗೆಯ ಕಾಮೆಂಟ್​ ಮಾಡಿದ್ದಾರೆ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯಶ್‌- ರಾಧಿಕಾ ದಂಪತಿ ತಮ್ಮ ಅಭಿಮಾನಿಗಳಿಗಾಗಿ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಯಶ್‌ ಅಭಿನಯ ಮತ್ತು ಪ್ರಶಾಂತ್ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ‘ಕೆಜಿಎಫ್‌: ಚಾಪ್ಟರ್‌ -2’ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೆಜಾನ್ ಪ್ರೈಮ್​ನಿಂದ ಆಫರ್​: ಪುನೀತ್‌ ಸ್ಮರಣೆಗಾಗಿ ಉಚಿತ ಒ೦ದು ತಿ೦ಗಳ ಸಿನಿಮಾ ಪ್ರದರ್ಶನ.

Sun Jan 23 , 2022
ಪುನೀತ್‌ ರಾಜ್‌ಕುಮಾರ್ ನೆನಪಿಗಾಗಿ ಅವರ ಪಿಆರ್‌ಕೆ ಸ್ಟುಡಿಯೋ ನಿರ್ಮಾಣದ ಮೂರು ಸಿನಿಮಾಗಳ ವಿಶೇಷ ಪ್ರೀಮಿಯರ್‌ ಹಾಗೂ ಪುನೀತ್‌ ಅವರ ಐದು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಅಮೆಜಾನ್ ಪ್ರೈಮ್ ವಿಡಿಯೊ ಘೋಷಿಸಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’, ‘ಒನ್‌ ಕಟ್‌ ಟು ಕಟ್’ ಮತ್ತು ‘ಫ್ಯಾಮಿಲಿ ಪ್ಯಾಕ್‌’ ಸಿನಿಮಾಗಳು ಅಮೆಜಾನ್‌ ಪ್ರೈಮ್‌ನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿವೆ ಎಂದು ಅಮೇಜಾನ್​ ವಕ್ತಾರರು ತಿಳಿಸಿದ್ದಾರೆ. ಉಚಿತ ಪ್ರದರ್ಶನ ಎಕ್ಸ್‌ಕ್ಲೂಸಿವ್ ವರ್ಲ್ಡ್‌ […]

Advertisement

Wordpress Social Share Plugin powered by Ultimatelysocial