ಸಿನಿಲೋಕಕ್ಕೆ ಸಚಿನ್ ಚೆಲುವರಾಯಸ್ವಾಮಿ ರೀ-ಎಂಟ್ರಿ… ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಅದ್ದೂರಿ ಕಂಬ್ಯಾಕ್!

ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೆ….ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗಿಂಗ್…ವಿ.ನಾಗೇಂದ್ರ ಪ್ರಸಾದ್ ಅಂದ ಚೆಂದದ ಪದಗಳನ್ನು ಪೊಣಿಸಿ ಬರೆದ ಅದ್ಭುತ ಸಾಹಿತ್ಯದ ಈ ಗಾನಲಹರಿಗೆ ಧ್ವನಿಯಾದವರು ನವೀನ್ ಸಜ್ಜು. ಇದೇ ಹಾಡಿನಲ್ಲಿ ಲವರ್ ಬಾಯ್ ಲುಕ್ ನಲ್ಲಿ, ಅದ್ಭುತ ನಟನೆ ಮೂಲಕ ಗಮನಸೆಳೆದವರು ಸಚಿನ್ ಚೆಲುವರಾಯಸ್ವಾಮಿ.

ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ.

ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್,ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು,ಕಾಲೇಜು,ಎಮೋಷನ್‌,ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್.ಕೃಷ್ಣ ನಿರ್ದೇಶನ 'ಕಾಳಿ' ರೋಮ್ಯಾಂಟಿಕ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್!

Tue May 10 , 2022
ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ನಟಿಸಿದ್ದು ಸಿನಿಮಾ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ, ಇದೇ ವೇಳೆ ಅಭಿಷೇಕ್ ಮತ್ತೊಂದು ಸಿನಿಮಾದಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ. ಹೆಬ್ಬುಲಿ, ಪೈಲ್ವಾನ್ ನಿರ್ದೇಶಕ ಎಸ್.ಕೃಷ್ಣ ಅವರ ನಿರ್ದೇಶನ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಿದ್ದಾರೆ. ಸಿನಿಮಾಗೆ ಕಾಳಿ ಎಂದು ಟೈಟಲ್ ಫಿಕ್ಸ್ ಆಗಿದೆ. 1990 ರ ಕಾವೇರಿ ಗಲಾಟೆಯ ವೇಳೆ ನಡೆಯು ರೊಮ್ಯಾಂಟಿಕ್ ಕಥೆ ಇದಾಗಿದೆ. ಆದಾಗ್ಯೂ ಸಿನಿಮಾದ ಬಗ್ಗೆ ನಟ ಮತ್ತು ನಿರ್ದೇಶಕರು ಹೆಚ್ಚಿನ […]

Advertisement

Wordpress Social Share Plugin powered by Ultimatelysocial