ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!

ಚಾಮರಾಜನಗರ:ವಾಹನ ದಟ್ಟಣೆ ನಿಯಂತ್ರಿಸಬೇಕಾದ ಪೊಲೀಸರ ವಾಹನವೇ ರಸ್ತೆ ಮಧ್ಯೆ ಕೆಟ್ಟು ನಿಂತು ಅವಾಂತರ ಸೃಷ್ಟಿಸಿರುವ ಘಟನೆ ಹನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿದೆ.

ಬಂದೋಬಸ್ತ್ ಗಾಗಿ ಆಗಮಿಸಿದ್ದ Swaraz Mazda ವ್ಯಾನ್ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಇದರಿಂದಾಗಿ, ಇತರೆ ವಾಹನಗಳು ಹಾಗೂ ಸಾರ್ವಜನಿಕರು ಕಿರಿಕಿರಿಯನ್ನೂ ಅನುಭವಿಸಿದ್ದಾರೆ.

ಇನ್ನೂ ಅಲ್ಲೇ ಇದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ತಳ್ಳು-ಐಸಾ ಎಂದು ವ್ಯಾನನ್ನು ನೂಕಿಕೊಂಡು ರಸ್ತೆಬದಿವರೆಗೆ ತಂದು ನಿಲ್ಲಿಸಿದ್ದಾರೆ, ಬಳಿಕ ತಾಂತ್ರಿಕ ರಿಪೇರಿಯಿಂದ ವಾಹನ ಮತ್ತೇ ಚಾಲುಗೊಂಡಿದೆ ಎಂದು ತಿಳಿದುಬಂದಿದೆ. ಸದ್ಯ, ಈ ಘಟನೆ ಬುಧವಾರ ಸಂಜೆ ನಡೆದಿದ್ದು ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ವಿಡಿಯೋ ಹರಿದಾಡುತ್ತಿದೆ, ತುರ್ತು ಸಂದರ್ಭದಲ್ಲಿ ಜನರಿಗೆ ಸೇವೆ ಕಲ್ಪಿಸುವ ಪೊಲೀಸರ ವಾಹನವೇ ಹೀಗಾದರೇ ಗತಿ ಏನು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಅತಿ ವಿಜೃಂಭಣೆಯಿಂದ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ!

Thu May 5 , 2022
ಬೆಳಗಿನ ಜಾವ 6.30ರವರೆಗೂ ಸಾಗಿದ ಅದ್ಧೂರಿ ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿದ್ದ ಕುಂದಾನಗರಿ ಬೆಳಗಾವಿ ಮೆರವಣಿಗೆಯುದ್ದಕ್ಕೂ ಗಮನ ಸೆಳೆದ ಶಿವಾಜಿ ಮಹಾರಾಜರ ಸಾಹಸ ಕಥೆ ಹೇಳುವ ದೃಶ್ಯಾವಳಿಗಳು 70ಕ್ಕೂ ಅಧಿಕ ವಿವಿಧ ರೂಪಕಗಳು ಮೆರವಣಿಗೆಯಲ್ಲಿ ಭಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಮೆರವಣಿಗೆಯಲ್ಲಿ ಭಾಗಿಯಾಗಿ ರೂಪಕಗಳ ಕಣ್ಣುತುಂಬಿಕೊಂಡ ಸಾವಿರಾರು ಜನರು ನಿನ್ನೆ ಸಂಜೆ 6 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಿದ್ದ ಶಾಸಕ ಅನಿಲ್ ಬೆನಕೆ, ಅಭಯ್ ಪಾಟೀಲ್ ನರಗುಂದಕರ ಭಾವೆ […]

Advertisement

Wordpress Social Share Plugin powered by Ultimatelysocial