ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುವ ಕುರಿತು ಟ್ವೀಟ್!

ಬೆಂಗಳೂರು, ಡಿಸೆಂಬರ್‌ 16: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುವ ಕುರಿತು ಟ್ವೀಟ್ ಮಾಡಿದ ಅಪರಿಚಿತ ಟ್ವಿಟರ್ ಬಳಕೆದಾರನೊಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.ನಾನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡುತ್ತೇನೆ.ಇದರಿಂದಾಗಿ ನಗರಕ್ಕೆ ಹತ್ತಿರದಲ್ಲಿ ಹೊಸ ವಿಮಾನವನ್ನು ನಿರ್ಮಿಸಬಹುದು ಎಂದು ವ್ಯಕ್ತಿಯೊಬ್ಬ ಟ್ವೀಟ್‌ ಮಾಡಿದ್ದಾನೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರ ದೂರನ್ನು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ನಂತರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯ ಪೊಲೀಸರು ಆರಂಭದಲ್ಲಿ ಟ್ವೀಟ್ ಕುರಿತು ನಾನ್-ಕಾಗ್ನೈಸಬಲ್ ವರದಿ (ಎನ್‌ಸಿಆರ್) ದಾಖಲಿಸಿದ್ದಾರೆ.ಈ ಕುರಿತು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ದೇವನಹಳ್ಳಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಪೊಲೀಸರಿಗೆ ಆದೇಶಿಸಿದ್ದಾರೆ. ಅದರಂತೆ ಪೊಲೀಸರು ಡಿಸೆಂಬರ್ 12ರಂದು ಟ್ವೀಟ್‌ನಿಂದ ಸಾರ್ವಜನಿಕ ಕಿಡಿಗೇಡಿತನ ಮತ್ತು ಕ್ರಿಮಿನಲ್ ಬೆದರಿಕೆಯೊಡ್ಡಿದ ಹೇಳಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳನ್ನು ಅನ್ವಯಿಸಿ ಎಫ್‌ಐಆರ್ ದಾಖಲಿಸಿದ್ದಾರೆ.ಡಿಸೆಂಬರ್ 10ರಂದು ರಾತ್ರಿ 10.15 ಕ್ಕೆ @futureftsufjan ಎಂಬ ಟ್ವೀಟ್‌ ಬಳಕೆದಾರನೊಬ್ಬ ಪೋಸ್ಟ್ ಮಾಡಿದ ಟ್ವೀಟ್ ಹೀಗಿದೆ. ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುತ್ತೇನೆ. ಆದ್ದರಿಂದ ಅವರು ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಮರುನಿರ್ಮಾಣ ಮಾಡಬೇಕಾಗಬಹುದು ಎಂದು ಬರೆದಿದ್ದಾನೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿರುವ ದೂರದ ಬಗ್ಗೆ ಪ್ರಯಾಣಿಕರು ಆಗಾಗ್ಗೆ ವಿಮಾನ ನಿಲ್ದಾಣವು ಬೆಂಗಳೂರಿನ ನಗರದಿಂದ ಸುಮಾರು 40 ಕಿಮೀ ದೂರದಲ್ಲಿದೆ, ಕೈಗೆಟುಕುವ ಸಾರ್ವಜನಿಕ ಸಾರಿಗೆಯ ಕೊರತೆಯಿದೆ ಎಂದು ದೂರು ನೀಡುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಗೆಲುವಿಗೆ 4 ಸೂತ್ರ – 130 ಕ್ಷೇತ್ರ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ

Fri Dec 16 , 2022
  ದೆಹಲಿಯಲ್ಲಿ ಕಾಂಗ್ರೆಸ್‌ ಮಹತ್ವದ ಚರಚೆ ನಡೆಸಿದ್ದು, ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಚುನಾವಣಾ ತಂತ್ರಜ್ಞ ಸುನೀಲ್‌ ಒಂದಿಷ್ಟು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 2 ಬಾರಿ ಸಂಇಕ್ಷೆ ನಡೆಸಿರುವ ಸುನಿಲ್‌ ನಾಯಕರಿಗೆ ಮಾಹಿತಿ ನೀಡಿದ್ದಾರೆ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 130 ಕ್ಷೇತ್ರಗಳನ್ನ ಗೆಲ್ಲುವ ಸಾಧ್ಯತೆ ಇದ್ದು, ಹೆಚ್ಚಿನ ಟಾರ್ಗೆಟ್‌ ಮಾಡಿ ಎಂದಿದ್ದಾರೆ. ಸರ್ವೆಯಲ್ಲಿ ಸೋಲ್ತಾರೆ ಎನ್ನುವ ಅಭ್ಯರ್ಥಿಗಳಿಗೆ ಅವರೂ ಎಷ್ಟೇ ಹಿರಿಯ ಪ್ರಭಾವಿ ನಾಯಕರಾಗಿದ್ರೂ ಅವರಿಗೆ ಟಿಕೆಟ್‌ ನೀಡೋದು ಬೇಡ ಎಂದಿದ್ದಾರೆ […]

Advertisement

Wordpress Social Share Plugin powered by Ultimatelysocial