ಮಿತವಾಗಿ ಸೇವಿಸಿ ಗೋಡಂಬಿ

ಮಿತವಾಗಿ ಸೇವಿಸಿ ಗೋಡಂಬಿ

ಕೆಲವಷ್ಟು ಸಿಹಿ ತಿಂಡಿಗಳು ನಮಗೆ ಇಷ್ಟವಾಗದೆ ಇರಬಹುದು, ಆದರೆ ಅದರಲ್ಲಿರುವ ಗೋಡಂಬಿಯನ್ನು ಖಂಡಿತ ಹೆಕ್ಕಿ ತಿಂದಿರುತ್ತೇವೆ. ಬಹುಶಃ ಗೋಡಂಬಿ ಇಷ್ಟವಿಲ್ಲ ಎನ್ನುವವರು ಯಾರೂ ಇರಲಿಕ್ಕಿಲ್ಲವೇನೋ. ಅದರಿಂದ ಅರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ.

ಗೋಡಂಬಿಯನ್ನು ನಿಯಮಿತವಾಗಿ ಅಂದರೆ ಒಂದೆರಡು ಮಾತ್ರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ದೂರವಿರಬಹುದು.

ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಹೃದಯ ಸಂಬಂಧಿ ರೋಗಗಳಿಂದ ಮುಕ್ತಿ ಕೊಡುತ್ತದೆ.

ವಾರಕ್ಕೆ ಎರಡು ಬಾರಿ ಎಣ್ಣೆ ಹಾಗೂ ಉಪ್ಪು ಹಾಕದ ಗೋಡಂಬಿಯನ್ನು ಸೇವಿಸಬೇಕು. ಅತಿಯಾಗಿ ತಿಂದರೆ ಕ್ಯಾಲರಿ ಹೆಚ್ಚುವ ಸಾಧ್ಯತೆಗಳಿವೆ. ಪ್ರೊಟೀನ್, ನಾರಿನಂಶ, ವಿಟಮಿನ್ ಹೇರಳವಾಗಿರುವ ಗೋಡಂಬಿ ಹೃದಯವನ್ನು ಆರೋಗ್ಯವಾಗಿಡುತ್ತದೆ.

ಇದನ್ನು ಮಿತ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡದಂತಹ ಸಮಸ್ಯೆಯಿಂದಲೂ ದೂರವಿರಬಹುದು. ರಕ್ತಹೀನತೆಗೂ ಇದು ಉತ್ತಮ ಮದ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Love You Rachchu :ಲಾಸ್ಟ್‌ ವರೆಗೂ ಸಿನಿಮಾದಲ್ಲಿ ಥ್ರಿಲ್‌ ಇದೆ | Love You Rachchu | Ajay Rao |Speed News |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial