ಸಿದ್ದಾಪುರ: ಕೊರೊನಾ ಹಿನ್ನೆಲೆಯಲ್ಲಿ ಶಾಲಾ- ಕಾಲೇಜು ತೆರೆಯದ ಕಾರಣ ಶಿಕ್ಷಣಕ್ಕೆ ಬೇಕಾದ ಮಾಹಿತಿಗಳು ಸರಿಯಾಗಿ ಜನರನ್ನು ತಲುಪುತ್ತಿಲ್ಲ ಅದಕ್ಕೆ ಕೆಲವೊಂದು ಸಾರಿ ನೆಟ್ ವರ್ಕ್ ಸರಿಯಾಗಿರುವುದಿಲ್ಲ. ಈ ನೆಟ್ ವರ್ಕ್ ಹುಡಿಕಿ ಹೋದ ಯುವಕ ಆಸ್ಪತ್ರೆ ಪಾಲಾಗಿದ್ದಾನೆ. ತಗ್ಗು ಪ್ರದೇಶದ ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗ್ತಿಲ್ಲ ಎಂದು ರಾತ್ರಿ ವೇಳೆ ಗುಡ್ಡ ಏರಿದ್ದ ಯುವಕನನ್ನು ಕಾಡು ಪ್ರಾಣಿ ಎಂದು ಭಾವಿಸಿ ಬೇಟೆಗಾರ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕುಂಬಾರಕುಳಿ ಮೂಲದ ಗೊಂಟನಾಳ ನಿವಾಸಿ ಪ್ರದೀಪ್ ನಾರಾಯಣ್ ಗೌಡ ಗಾಯಗೊಂಡಿದ್ದಾನೆ. ಕಾಲೇಜು ವಿದ್ಯಾರ್ಥಿಯಾದ ಈತ ಮೊಬೈಲ್ ಮೂಲಕ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ನೆಟ್ವರ್ಕ್ ಹುಡುಕಿಕೊಂಡು ರಾತ್ರಿ ವೇಳೆ ಗುಡ್ಡ ಏರಿದ್ದ. ಮೊಬೈಲ್ ನೆಟ್ ವರ್ಕ್ ಸಿಕ್ಕಿರುವುದರಿಂದ ಅಲ್ಲೇ ಕುಳಿತಿದ್ದ. ಬೇಟೆಗಾರ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ, ಯಾವುದೋ ಕಾಡುಪ್ರಾಣಿ ಎಂದು ಭಾವಿಸಿ ಗುಂಡು ಹಾರಿಸಿದ್ದಾನೆ. ಯುವಕನ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಪಿಐ ಪ್ರಕಾಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗುಡ್ಡ ಏರಿದ್ದ ಯುವಕನಿಗೆ ಗುಂಡೇಟು

Please follow and like us: