ಗ್ರಾಮಪಂಚಾಯಿತಿ ಚುನಾವಣೆ ಮುಂದೂಡಿಕೆ

ಕೋವಿಡ್-19 ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೊ ಬೇಡವೋ ಎನ್ನುವುದರ ಬಗ್ಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿದ್ದು,  ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಆದ್ದರಿಂದ ಮುಂದಿನ ತಿಂಗಳು ನಡೆಯಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕೊರೊನಾವೈರಸ್ ಹಾವಳಿಯಿಂದ ಮುಂದಕ್ಕೆ ಹಾಕಬೇಕೆಂದು ಚುನಾವಣಾ ಆಯೋಗ ಆದೇಶಿಸಿದ್ದು, ದಿನಾಂಕ ಇನ್ನೂ ತಿಳಿಸಿಲ್ಲ. ಈ ವರದಿಯ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

    ಮಿತಿಮೀರಿದ ಮಿಡತೆಗಳ ಹಾವಳಿ

Fri May 29 , 2020
ಪಾಕಿಸ್ಥಾನದಿಂದ ದಂಡೆತ್ತಿ ಬಂದಿರುವ ಮಿಡತೆಗಳ ಹಿಂಡು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ, ಹಾಗೆ ದಿನೇ ದಿನೆ ಒಂದೊಂದೇ ರಾಜ್ಯ ಪ್ರವೇಶಿಸುತ್ತಿರುವ ಮಿಡತೆಗಳು ಪ್ರಸ್ತುತ ಏಳು ರಾಜ್ಯಗಳಲ್ಲಿ ತನ್ನ ಹಾವಳಿ ಆರಂಭಿಸಿದೆ. 20 ಜಿಲ್ಲೆಗಳ 303 ಪ್ರದೇಶಗಳಲ್ಲಿ ಒಟ್ಟು 47,000 ಹೆಕ್ಟೇರ್‌ ಪ್ರಮಾಣದ ಕೃಷಿ ಭೂಮಿಯಲ್ಲಿನ ಬೆಳೆಗೆ ಮಿಡತೆಗಳು ಮುತ್ತಿಗೆ ಹಾಕಿದೆ. ಪರಿಸ್ಥಿತಿಯ ಗಂಭೀರತೆ ತಿಳಿದ ಕೇಂದ್ರ ಸರ್ಕಾರ ಕೀಟಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, […]

Advertisement

Wordpress Social Share Plugin powered by Ultimatelysocial