ಮತ್ತೆ ಬಂದರು ರೂರಲ್ ಸ್ಟಾರ್ ಅಂಜನ್.. ‘ಚೋಳ’ ಸಿನಿಮಾದ ಫಸ್ಟ್ ಲುಕ್ ರಿಲೀಸ್..

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ನಿರ್ಮಾಪಕರು, ನಿರ್ದೇಶಕರಾಗೋದು, ನಿರ್ದೇಶಕರು ನಿರ್ಮಾಪಕರಾಗುವುದು ಕಾಮನ್. ಈ ಹಿಂದೆ ಪ್ರಯಾಣಿಕರ ಗಮನಕ್ಕೆ, ರಣಹೇಡಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಡಿಎಂ ಸುರೇಶ್ ಈಗ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಚೋಳ ಎಂಬ ಸಿನಿಮಾ ಮೂಲಕ ಸುರೇಶ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇವತ್ತು ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಯಿತು.

ನಿರ್ಮಾಣದ ನಂತರ ಹೆಚ್ಚಿನ ಜವಾಬ್ದಾರಿ ಹೊತ್ತು ನಿರ್ದೇಶನ ಹೊಣೆ ಹೊತ್ತಿದ್ದು, ಜೊತೆಗೆ ನಿರ್ಮಾಣ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕ ಭಾಗದ ಖ್ಯಾತ ನಟ ರೂರಲ್ ಸ್ಟಾರ್ ಅಂಜನ್ ನಾಯಕ ನಟನಾಗಿ ನಟಿಸ್ತಿದ್ದು, ದಿಶಾ ಪಾಂಡೆ, ರಚನಾ ನಾಯಕಿಯಾಗಿ ನಟಿಸ್ತಿದ್ದಾರೆ ಎಂದು ನಿರ್ದೇಶಕ ಕಂ ನಿರ್ಮಾಪಕ ಡಿಎಂ ಸುರೇಶ್ ಮಾಹಿತಿ ನೀಡಿದರು.

ಚೋಳ ಅಂದತಕ್ಷಣ ರಾಜಮನೆತನ ನೆನಪಾಗುತ್ತದೆ. ಇದು ಆ ಕಥೆಯಲ್ಲ. ಈ ಸಿನಿಮಾದಲ್ಲಿ ನನಗೆ ಎರಡು ಗೆಟಪ್ ಇರುತ್ತದೆ. ತಂದೆ ತಾಯಿ ನೆಚ್ಚಿನ ಮಗನಾಗಿ ಇರುವ ನಾಯಕ ರೌಡಿ ಯಾಕೆ ಆಗುತ್ತಾನೆ ಅನ್ನೋದೇ ಕಥೆಯ ತಿರುಳು ಎಂದು ನಾಯಕ ಅಂಜನ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಮಾಸ್ ಸಿನಿಮಾವಾಗಿರುವ ಚೋಳ ಚಿತ್ರದಲ್ಲಿ ರೂರಲ್ ಸ್ಟಾರ್ ಅಂಜನ್ ಗೆ ಜೋಡಿಯಾಗಿ ದಿಶಾ ಪಾಂಡೆ, ರಚನಾ ನಾಯಕಿಯಾಗಿ ನಟಿಸ್ತಿದ್ದು, ಉಳಿದಂತೆ ಅವಿನಾಶ್, ಶೋಭರಾಜ್, ದಿನೇಶ್ ಮಂಗಳೂರು, ಅಚ್ಯುತ್ ಕುಮಾರ್, ಧರ್ಮ, ಶಶಿಕಲಾ, ಅಭಿನಯ ಹಾಗೂ ಚಿತ್ರ ನಟಿಸ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ.

Wed Apr 13 , 2022
  ಬೆಂಗಳೂರು, ಏಪ್ರಿಲ್ 13: ದೇಶದಲ್ಲಿ ಇಂಧನ ದರ ಏರಿಕೆ ಒಂದು ಕಡೆಯಾದರೆ, ಮತ್ತೊಂದು ಕಡೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಗಗನನಕ್ಕೆ ಏರುತ್ತಿದೆ. ಇದರಿಂದ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಇದೆಲ್ಲದರ ನಡುವೆ ಕರ್ನಾಟಕ ರಾಜಧಾನಿ ಬೆಂಗಳೂರಿಗರ ಜೀವನಾಡಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪ್ರಯಾಣ ದರ ಏರಿಕೆಯಾಗಲಿದ್ದು, ಬಿಎಂಟಿಸಿ ಬಸ್‌ನಲ್ಲಿ ಓಡಾಡುವ ಜನರಿಗೆ ಶಾಕ್ ದರ ಏರಿಕೆ ಶಾಕ್ […]

Advertisement

Wordpress Social Share Plugin powered by Ultimatelysocial