ಗದಗ ಕ್ರಿಕೆಟ್ ಲೀಗ್‌ನ (GCL) ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ.

ಹತ್ತು ವರ್ಷಗಳ ಹಿಂದೆ ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿದ್ದ ಗದಗ ಕ್ರಿಕೆಟ್ ಲೀಗ್‌ನ (GCL) ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಗದಗ ಹಬ್ಬದ ಸಂಭ್ರಮಕ್ಕಾಗಿ ತಿಂಗಳು ಮೊದಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗದಗದಲ್ಲಿ ನಡೆಯುವ ಜಿಸಿಎಲ್ ಮೂರನೇ ಸೀಸನ್‌ನ್ನು ಈ ಬಾರಿ ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿಯು ವಿಶಿಷ್ಟವಾಗಿ ಆಚರಿಸಲು ತಯಾರಿ ನಡೆಸುತ್ತಿದೆ. ವಿದೇಶಿ ಆಟ ಕ್ರಿಕೆಟ್ ಜೊತೆಗೆ ದೇಶಿಯ ಕ್ರೀಡೆಗಳನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ. ಈ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅನಿಲ್ ಆಂಡ್ ಟೀಂ ಪಣತೊಟ್ಟಿದೆ.

ಗದಗ ಕ್ರೀಕೆಟ್ ಹಬ್ಬದ ಹಿನ್ನಲೆಯಲ್ಲಿ ಗದಗ ತಾಲೂಕಿನ ಬೆಳೆದಡಿ ಗ್ರಾಮದಲ್ಲಿ ಬಿಜೆಪಿ ನಾಯಕ ಅನೀಲ್ ಮೆಣಸಿನಕಾಯಿ ನೇತೃತ್ವದಲ್ಲಿ ಬಂಜಾರ ಹಬ್ಬ ಎಂಬ ಲಾಂಚನ ಬಿಡುಗಡೆ ಮಾಡಲಾಯಿತು.

ಲಾಂಚನ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ನಾಯಕ ಅನೀಲ್ ಮೆಣಸಿನಕಾಯಿ ದೇಶ ಅಲ್ಲದೇ ವಿಶ್ವದಲ್ಲಿ ವಿಶಿಷ್ಟ ಸಂಸ್ಕೃತಿ, ವೇಷಭೂಷಣ ಹೊಂದಿರುವ ಜನಾಂಗ ಅಂದರೆ ಅದು ಬಂಜಾರ ಜನಾಂಗ ಅವರು ವಿಶಿಷ್ಠವಾದ ಬಜನಾಪದಗಳು, ನೃತ್ಯ, ವೇಷಭೂಷಣ ಜನಮನ ಸೆಳೆಯುತ್ತದೆ. ಹಾಗಾಗಿ ಜಿಸಿಎಲ್ ನಲ್ಲಿ ಬಂಜಾರ ಹಬ್ಬ ಎಂಬ ವಿಶೇಷ ಹಬ್ಬ ಆಚರಿಸಲು ನಿರ್ಧರಿಸಿದ್ದು ಖುಷಿ ತಂದಿದೆ. ಜಿಸಿಎಲ್ ಹಬ್ಬಕ್ಕೆ ಬಂಜಾರ ಹಬ್ಬ ಮೆರಗು ತಂದು ಕೊಡಲಿದೆ.ಬಂಜಾರ ಜನಾಂಗದ ನನ್ನ ಎಲ್ಲಾ ಬಂದುಗಳು ಹಬ್ಬ ಯಶಸ್ವಿ ಮಾಡಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಗ್ಗಿದ ಹಮ್ಮಗಿ ಬ್ಯಾರೇಜ್ ನ ಒಳಹರಿವು, ನಿಟ್ಟುಸಿರು ಬಿಟ್ಟ ಹಿನ್ನೀರಿನ ಗ್ರಾಮಸ್ಥರು

Mon Jul 18 , 2022
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್ ನ ಒಳಹರಿವಿನ ಪ್ರಮಾಣ ತಗ್ಗಿದೆ. ಬೆಳಿಗ್ಗೆ ಹೆಚ್ಚಾಗಿದ್ದ ಒಳಹರಿವಿನ ಪ್ರಮಾಣ ಸಂಜೆ ವೇಳೆ ತಗ್ಗಿದೆ‌‌. ಇಂದು ಮುಂಜಾನೆ 1.80 ಲಕ್ಷ ಕ್ಯೂಸೆಕ್ಸ್ ಇದ್ದಿದ್ದ ಒಳಹರಿವಿನ ಪ್ರಮಾಣ ಸಂಜೆಯ ವೇಳೆಗೆ 1.60 ಲಕ್ಷ ಕ್ಯೂಸೆಕ್ಸ್ ಗೆ ಬಂದು ನಿಂತಿದೆ. ಇನ್ನು ಮಳೆ ಪ್ರಮಾಣ ಇಳಿಮುಖ ಆಗಿದ್ದರಿಂದ ನದಿ ಒಳಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.‌ ಇದರಿಂದ ಹಮ್ಮಗಿ ಸೇರಿದಂತೆ ಹಿನ್ನೀರಿನ ಗ್ರಾಮಗಳು ತುಂಗಭದ್ರಾ […]

Advertisement

Wordpress Social Share Plugin powered by Ultimatelysocial