ತಗ್ಗಿದ ಹಮ್ಮಗಿ ಬ್ಯಾರೇಜ್ ನ ಒಳಹರಿವು, ನಿಟ್ಟುಸಿರು ಬಿಟ್ಟ ಹಿನ್ನೀರಿನ ಗ್ರಾಮಸ್ಥರು

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್ ನ ಒಳಹರಿವಿನ ಪ್ರಮಾಣ ತಗ್ಗಿದೆ. ಬೆಳಿಗ್ಗೆ ಹೆಚ್ಚಾಗಿದ್ದ ಒಳಹರಿವಿನ ಪ್ರಮಾಣ ಸಂಜೆ ವೇಳೆ ತಗ್ಗಿದೆ‌‌. ಇಂದು ಮುಂಜಾನೆ 1.80 ಲಕ್ಷ ಕ್ಯೂಸೆಕ್ಸ್ ಇದ್ದಿದ್ದ ಒಳಹರಿವಿನ ಪ್ರಮಾಣ ಸಂಜೆಯ ವೇಳೆಗೆ 1.60 ಲಕ್ಷ ಕ್ಯೂಸೆಕ್ಸ್ ಗೆ ಬಂದು ನಿಂತಿದೆ. ಇನ್ನು ಮಳೆ ಪ್ರಮಾಣ ಇಳಿಮುಖ ಆಗಿದ್ದರಿಂದ ನದಿ ಒಳಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.‌ ಇದರಿಂದ ಹಮ್ಮಗಿ ಸೇರಿದಂತೆ ಹಿನ್ನೀರಿನ ಗ್ರಾಮಗಳು ತುಂಗಭದ್ರಾ ನದಿಯ ಪ್ರವಾಹದ ಆತಂಕದಿಂದ ದೂರವಾಗಿವೆ.

ಇನ್ನು ಹಮ್ಮಗಿ ಬ್ಯಾರೇಜ್ ನಲ್ಲಿ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದೆ.‌ಆದ್ರೆ ಬ್ಯಾರೇಜ್ ನ ಹಿನ್ನೀರಿನ ಗ್ರಾಮಗಳಾದ ಗುಮ್ಮಗೋಳ, ವಿಠಲಾಪೂರ ಬಿದರಳ್ಳಿ ಮತ್ತ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳಗಡೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಬ್ಯಾರೇಜ್ ನಲ್ಲಿ ಕೇವಲ‌1.99 ಟಿಎಂಸಿ ನೀರನ್ನ ಮಾತ್ರ ಸಂಗ್ರಹಿಸಿ ಉಳಿದ ನೀರನ್ನ ನದಿಗೆ ಹರಿಬಿಡಲಾಗ್ತಿದೆ. ಹೀಗಾಗಿ ಒಟ್ಟು 26 ಗೇಟ್ ಗಳ ಪೈಕಿ 22 ಗೇಟ್ ಗಳ ಮುಖಾಂತರ ನೀರನ್ನ ನದಿಗೆ ಹರಿಬಿಡಲಾಗ್ತಿದೆ‌. ಇನ್ನು ನಿನ್ನೆ ನೀರು ಹೆಚ್ಚಾಗಿದ್ದ ಪರಿಣಾಮ ನದಿಗೆ ಹೊಂದಿಕೊಂಡಿದ್ದ ಮದಲಗಟ್ಟಿ ಹಣಮಪ್ಪನ ಗುಡಿಯಲ್ಲಿ‌ ನದಿ‌ನೀರು ಹೊಕ್ಕಿತ್ತು. ಆದ್ರೆ ಸದ್ಯ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ದೇವಸ್ಥಾನಕ್ಕೆ ಜಲದಿಗ್ಭಂದನ ಮುಕ್ತವಾಗಿದೆ.‌

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆ- ದೇವರ ದರ್ಶನಕ್ಕೆ ಬಂದಿದ್ದ ಯುವಕ ನೀರು ಪಾಲು.

Mon Jul 18 , 2022
ತುಂಗಾಭದ್ರಾ ನದಿಯಲ್ಲಿ ಕೊಚ್ಚಿಕೊಂಡ ಹೋದ ವ್ಯಕ್ತಿ. ಉಕ್ಕಡಗಾತ್ರಿ ದೇವರ ದರ್ಶನಕ್ಕೆ ಆಗಮಿಸಿದ್ದ ಯುವಕ. ರಾಜಗೊಂಡನಹಳ್ಳಿ ತಾಂಡಾದ ಪರಮೇಶ್ (34) ಕೊಚ್ಚಿ ಹೋದ ಯುವಕ. ತನ್ನ ಕುಟುಂಬದ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದ ಯುವಕ. ನದಿ ನೀರು ಹೆಚ್ಚಾಗಿದ್ದರಿಂದ ಕಾಲು ಜಾರಿ ಬಿದ್ದ ಯುವಕ. ನದಿ ನೀರಿನಲ್ಲಿ ಕಾಲು ತೊಳೆದುಕೊಳ್ಳುವಾಗ ಘಟನೆ. ಶವಕ್ಕಾಗಿ ಎರಡು ದಿನಗಳಿಂದಲು ಶೋಧಕಾರ್ಯ. ದಾವಣಗೆರೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಘಟನೆ. ನುರಿಗ ಈಜುಗಾರರು, ಮುಳುಗು ತಜ್ಞರಿಂದ ಶೋಧ. ಸ್ಥಳಕ್ಕೆ […]

Advertisement

Wordpress Social Share Plugin powered by Ultimatelysocial