ಜಮಖಂಡಿ ತಾಲೂಕ ಮುತ್ತೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ.

ಐದು ದಿನಗಳ ವರೆಗೆ ಅದ್ದೂರಿಯಾಗಿ ಜರುಗಿದ ಜಮಖಂಡಿ ತಾಲೂಕ ಮುತ್ತೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಮುತ್ತೂರ ಮಹಾಲಕ್ಷ್ಮೀದೇವಿಯ ಜಾತ್ರೆಯು ಐದು ದಿನಗಳವರೆಗೆ ಅತೀ ವಿಜ್ರಂಬಣೆಯಿಂದ ಜರುಗಿತುರಾತ್ರಿ 9 ಗಂಟೆಗೆ ಪಲ್ಲಕ್ಕಿ ಸೇವೆ ಮುಂಜಾನೆ 6 ಗಂಟೆಗೆ ದೇವಿಗೆ ಪಂಚಾಮ್ರತ ಅಭಿಷೇಕ ಮತ್ತು ವಿಷೇಶ ಪೂಜೆ ಮತ್ತು ಸಂಜೆ 6 ಗಂಟೆಗೆ ಸಕಲವಾದ್ಯ ಮೇಳಗಳಿಂದ ವೈಭವ ಪೂರಿತ ಪಲ್ಲಕ್ಕಿ ಸೇವೆ.ಪ್ರತಿ ವರ್ಷದ ಪದ್ಧತಿಯಂತೆ ಸಂಜೆ 5 ಗಂಟೆಗೆ ಸಕಲ ವಾದ್ಯ ವೈಭವ ಗಳಿಂದ ಶ್ರೀ ದೇವಿಯು ಪವಿತ್ರ ಕ್ರಿಷ್ಣಾನದಿಗೆ ಹೋಗಿ ಮಕರ ಸಂಕ್ರಮಣದ ಪೂರ್ವಕಾಲದಲ್ಲಿ ಸ್ನಾನ ಮಾಡಿ ಬರುವುದು.ರಾತ್ರಿ 9 ಗಂಟೆಗೆ ಶ್ರೀ ದೇವಿಯನ್ನು ಬರಮಾಡಿಕೊಳ್ಳಲು ಸಕಲ ವಾದ್ಯ ಮೇಳ ಗಳೊಂದಿಗೆ ಕುದುರೆಕುಣಿತ,ನಂದಿ ಕೋಲು (ಕನ್ನಡಿಬಾಸಿಂಗ) ಸಹಿತವಾಗಿ ಆಗಮಿಸಿ ರಾತ್ರಿ 12 ಗಂಟೆಯ ವರೆಗೆ ಕರಡಿವಾದ್ಯ,ಡೊಳ್ಳು,ಹಲಗಿಮೇಳ ವಾದ್ಯ ನಡೆಹುತ್ತವೆ.ನಂತರ ಬೈಲಾಟಗಳು,ಡೊಳ್ಳಿನಪದಗಳು ನಡೆದವು.ನಂತರ ಕೊನೆಯ ದಿನ ಬೆಳಿಗ್ಗೆ 10 ಗಂಟೆಗೆ ಶ್ರೀ ದೇವಿಯ ಗುಡಿಯಿಂದ ವಾದ್ಯಮೇಳ ಗಳೊಂದಿಗೆ ನಂದಿ ಕೋಲು ಸಹಿತವಾಗಿ ಊರಿನ ಅಗಸಿಯ ಆವರಣದಲ್ಲಿ ವಿವಿಧ ವಾದ್ಯಗಳಿಂದ ವಾದ್ಯ ನುಡಿಸಿದ ವಾದ್ಯ ವ್ರಂದದವರು.ಅದೇದಿನ ಸಾಯಂಕಾಲ 4 ಗಂಟೆಗೆ ಸುಪ್ರಸಿದ್ಧ ಕುಸ್ತಿ ಕ್ರೀಡಾಪಟುಗಳಿಂದ ಜಂಗಿ ನಿಕಾಲಿ ಕುಸ್ತಿ ಗಳು ಜರುಗಿದವು.ಅದೇ ದಿನ ರಾತ್ರಿ 8 ಗಂಟೆಗೆ ಶ್ರೀ ದೇವಿ ಪಲ್ಲಕ್ಕಿ ಉತ್ಸವ ನಂತರ ರಾತ್ರಿ 9-30 ರಿಂದ ಮುಂಜಾನೆ 6-30 ಗಂಟೆಯ ವರೆಗೆ ಸುಪ್ರಸಿದ್ಧ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿದವು.ಈ ಎಲ್ಲಾ ಕಾರ್ಯಕ್ರಮ ಗಳಲ್ಲಿ ಸಕಲ ಸದ್ಬಕ್ತರು ಶ್ರೀ ದೇವಿಯ ಸೇವೆಯನ್ನು ಮಾಡಿ ಶ್ರೀ ದೇವಿಯ ಕ್ರಪಾಶಿರ್ವಾದಕ್ಕೆ ಪಾತ್ರ ರಾದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಶಿಕ್ಷಣ ಸಚಿವ, ಬ್ಯಾಡಗಿ ಕ್ಷೇತ್ರದ ಧುರೀಣ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶರಾಗಿದ್ದಾರೆ.

Tue Jan 17 , 2023
ಹಾವೇರಿ: ಮಾಜಿ ಶಿಕ್ಷಣ ಸಚಿವ, ಬ್ಯಾಡಗಿ ಕ್ಷೇತ್ರದ ಧುರೀಣ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೇಶಪ್ಪ ಲಮಾಣಿ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ದೇಶಪ್ಪ ಲಮಾಣಿ ಕರ್ನಾಟಕ ವಿಶ್ವವಿದ್ಯಾಲಯದ ಕಲಾ ಮಹಾವಿದ್ಯಾಲಯದ ಮುಖ್ಯ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಹಿರಿಯ ನಾಯಕನ ಅಗಲಿಕೆಗೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ 1983 ಹಾಗೂ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಚಿವ […]

Advertisement

Wordpress Social Share Plugin powered by Ultimatelysocial