ಚಿಕ್ಕ ವಯಸ್ಸಿನಲ್ಲಿ ನಾಲ್ಕು ಪದವಿ ಪಡೆದ ಬಾಲಕ

ಕ್ಯಾಲಿಫೋರ್ನಿಯಾ: 13 ವರ್ಷದ ಬಾಲಕ ಎರಡು ವರ್ಷದಲ್ಲಿ ನಾಲ್ಕು ವಿಷಯದಲ್ಲಿ ಪದವಿ ಪಡೆದಿದ್ದಾನೆ‌.  ಅಚ್ಚರಿಯಾದರೂ ಸತ್ಯ. ಕ್ಯಾಲಿಫೋರ್ನಿಯಾದ 13 ವರ್ಷದ ಜಾಕ್ ರಿಕೋ ಫುಲರ್ಟನ್ ಕಾಲೇಜ್ ನಲ್ಲಿ ಓದಿ ವಿಶ್ವದ ಅತಿ‌ ಚಿಕ್ಕ ವಯಸ್ಸಿನ ಪದವೀಧರ ಎನಿಸಿಕೊಂಡಿದ್ದಾನೆ. ಅದೂ ಸುಲಭದ ವಿಷಯಗಳಲ್ಲೂ ಅಲ್ಲ. ಇತಿಹಾಸ, ಮಾನವ ಅಭಿವ್ಯಕ್ತಿ, ಸಾಮಾಜಿಕ ನಡುವಳಿಕೆ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಓದಿ.‌ ಸರಿಯಾಗಿ ಜಿಪಿಎ ಸ್ಕೋರ್ ಮಾಡಿದ್ದಾನೆ. ಮಾಧ್ಯಮವೊಂದರ ಜತೆ ಮಾತನಾಡುತ್ತ ಜಾಕ್ “ನಾನು ಓದುವುದನ್ನು ಇಷ್ಟಪಡುತ್ತೇ‌ನೆ. ಜಗತ್ತಿನ ಬಗ್ಗೆ ಇನ್ನಷ್ಟು ತಿಳಿಯುವ ಇಚ್ಛೆ ಇದೆ” ಎಂದಿದ್ದಾನೆ. ಕಾಲೇಜು ಆಡಳಿತ ಕೂಡ ಇಂಥ ಮೇಧಾವಿ ವಿದ್ಯಾರ್ಥಿಗೆ‌ ಪದವಿ‌ ನೀಡಲು ಖುಷಿಪಟ್ಟಿದೆ. ಕೋವಿಡ್ 19 ಕಾರಣ ಪದವಿ ಪ್ರಧಾನ ಸಮಾರಂಭ ನಡೆದಿಲ್ಲ. ಕಾಲೇಜ್ ತನ್ನ ಟ್ವಿಟರ್ ಖಾತೆಯಲ್ಲಿ ರಿಕೊ ಆತನ ಕುಟುಂಬದ ಜತೆ ಇರುವ ಫೋಟೋ ಹಾಕಿ ಶ್ಲಾಘಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿಶ್ವದಾಖಲೆ ಮಾಡಿದ ಶ್ವಾನ..

Sat May 30 , 2020
ಒಂಟಾರಿಯೋ: ಆರು ವರ್ಷದ ನಾಯಿ ಫಿನ್ಲೆ 6 ಟೆನ್ನಿಸ್ ಬಾಲ್ ಗಳನ್ನು ಒಮ್ಮೆಲೇ ಬಾಯಲ್ಲಿ ಕಚ್ಚಿ ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದೆ. ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಫಿನ್ಲೆ ಎರಡು ವರ್ಷ ಇದ್ದಾಗಿನಿಂದಲೂ ಟೆನ್ನಿಸ್ ಬಾಲ್ ಕಚ್ಚಿ ಹಿಡಿಯುವುದನ್ನು ಕಲಿತಿತ್ತು ಎಂದು ಅದರ ಯಜಮಾನ ಐರಿನ್ ಮೊಲ್ಲೊಯ್ ತಿಳಿಸಿದ್ದಾರೆ. ಫಿನ್ಲೆ ಈ ಹಿಂದೆ ಐದು ಬಾಲ್ ಗಳನ್ನು ಒಮ್ಮೆಲೇ ಕಚ್ಚಿಕೊಂಡು ದಾಖಲೆ ಮಾಡಿತ್ತು. ಈಗ ತನ್ನದೆ ದಾಖಲೆಯನ್ನು […]

Advertisement

Wordpress Social Share Plugin powered by Ultimatelysocial