ಭಾರತ ಹಾಗೂ ಚೀನಾದ ನಡುವೆ ನಡೆಯುತ್ತಿರುವ ಬಿಕ್ಕಟ್ಟಿಗೆ ಪರ್ಣ ವಿರಾಮ ಇಡಲು ಉಭಯ ದೇಶಗಳು ಮುಂದಾಗಿವೆ. ಈ ಹಿನ್ನೆಲೆ ಭಾರತ ಹಾಗೂ ಚೀನಾದ ಲೆಫ್ಟಿನೆಂಟ್ ಜನರಲ್ ಹಂತದ ಅಧಿಕಾರಿಗಳ ಸಭೆಗೆ ದಿನ ನಿಗದಿಯಾಗಿದೆ. ಜೂನ್ ೬ರಂದು ಎರಡು ದೇಶದ ಲೆಫ್ಟಿನೆಂಟ್ ಜನರಲ್ಗಳು ಭೇಟಿಯಾಗಲಿದ್ದು, ಬಿಕ್ಕಟ್ಟಿನ ಕುರಿತು ರ್ಚೆ ನಡೆಸಲಿದ್ದಾರೆ. ಭಾರತ ಸೇನೆಯ ೧೪ನೇ ಕರ್ಪ್ನ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಭಾರತದ ಕಡೆಯಿಂದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಚೀನಾದ ಗಡಿಯಲ್ಲಿರುವ ಛುಶುಲ್-ಮೋಲ್ಡೋ ಗಡಿ ಪಾಯಿಂಟ್ನಲ್ಲಿ ಮೀಟಿಂಗ್ ನಡೆಯಲಿದೆ. ಮೂಲಗಳ ಪ್ರಕಾರ ಲಡಾಕ್ನಲ್ಲಿ ನಡೆಯುತ್ತಿರುವ ಬೆಳವಣಿಗೆ ಭಾರೀ ಸೂಕ್ಷ್ಮವಾಗಿರುವುದರಿಂದ ಲೆಫ್ಟಿನೆಂಟ್ ಜನರಲ್ ಹಂತದಲ್ಲಿ ಸಭೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಜೂ.೬ಕ್ಕೆ ಲೆಫ್ಟಿನೆಂಟ್ ಜನರಲ್ಗಳ ಸಭೆ
Please follow and like us: