ಟ್ವಿಟರ್ ಸೇವಾ ಅಳವಡಿಕೆ

ಕೋವಿಡ್-೧೯ ಗೆ ಸಂಬಂಧಿಸಿದ ಸಾರ್ವಜನಿಕರ ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯ ಟ್ವಿಟರ್ ಸೇವಾ ಎಂಬ ವಿನೂತನ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. ತ್ವರಿತಗತಿಯಲ್ಲಿ ಅತಿ ಹೆಚ್ಚು ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯವಿಧಾನಗಳನ್ನು ಆರೋಗ್ಯ ಸಚಿವಾಲಯ ಟ್ವಿಟರ್ ಅಳವಡಿಸಿಕೊಂಡಿದೆ. ಕೋವಿಡ್ ತಡೆಗೆ ಸರ್ಕಾರ ಕೈಗೊಂಡಿರುವ ಇತ್ತೀಚಿನ ಕ್ರಮಗಳು, ಆರೋಗ್ಯ ಸೇವೆಗಳನ್ನು ಪಡೆಯುವ ಮಾರ್ಗ, ರೋಗ ಲಕ್ಷಣಗಳು ಕಾಣಿಸಿಕೊಂಡವರಿಗೆ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿ, ಸಾರ್ವಜನಿಕರ ಅಗತ್ಯತೆಗಳಿಗೆ ಅಧಿಕಾರಿಗಳನ್ನು ಸಂಪರ್ಕಿಸುವುದು ಹೀಗೆ ಹಲವಾರು ವಿಷಯಗಳ ಕುರಿತ ಪ್ರಶ್ನೆಗಳಿಗೆ @CovidIndiaSeva ಗೆ ಟ್ವೀಟ್ ಮಾಡಿ ಆರೋಗ್ಯ ಸಚಿವಾಲಯದ ಟ್ವಿಟರ್ ಸೇವೆಯಲ್ಲಿ ಉತ್ತರ ಪಡೆಯಬಹುದಾಗಿದೆ. ಭಾರತ ಸಾಮಾಜಿಕ ಅಂತರ ವಿಧಾನದ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿದ್ದು, ಸಾರ್ವಜನಿಕರ ಪ್ರಶ್ನೆಗಳಿಗೆ, ಅಗತ್ಯತೆಗಳಿಗೆ ಸ್ಪಂದಿಸಲು ಟ್ವಿಟರ್ ಸೇವಾ ಅಳವಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಗೆದ್ದು ಬಂದ ಶೂರ

Mon Apr 20 , 2020
ಇಟಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಹರ ಸಾಹಸಪಟ್ಟಿತು. ಮಾ.13ರಂದು ತಿರುವನಂತಪುರದ ಕೇರಳಕ್ಕೆ ಭೇಟಿ ಕೊಟ್ಟಿದ್ದರು. ಆಗ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ, ಟೋನಿಜ್  ಈಗ ಕೊರೊನಾ  ಸೋಂಕಿನಿಂದ  ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.  ಅವರನ್ನು ಸೋಮವಾರ ಆಸ್ಪತ್ರೆಯ ಸಿಬ್ಬಂದಿ ಮತ್ತು ಕೇರಳ ಸರ್ಕಾರ ಸನ್ಮಾನ ಮಾಡಿ ಬೀಳ್ಕೊಟ್ಟಿದೆ. ಅವರು ಬೆಂಗಳೂರಿಗೆ ತೆರಳಲು ಕೇರಳ ಸರ್ಕಾರವೇ ಸಹಾಯ ಮಾಡಿದೆ. Please follow and like us:

Advertisement

Wordpress Social Share Plugin powered by Ultimatelysocial