ತಾಜ್ ಮಹಲ್ ಗೆ ಹಾನಿ

ಉತ್ತರ ಪ್ರದೇಶದ ಹಲವೆಡೆ ಭಾರಿ ಗುಡುಗು ಮಳೆಯಾಗಿದ್ದ, ಪರಿಣಾಮ ಸಿಡಿಲು ಬಡಿದು ವಿಶ್ವ ವಿಖ್ಯಾತವಾದ ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್ ಗೆ ಹಾನಿಯಾದ ಘಟನೆ ನಡೆದಿದೆ.. ಐತಿಹಾಸಿಕ ತಾಜ್‌ ಮಹಲ್‌ನ ಅಮೃತ ಶಿಲೆಯ ಅಡ್ಡಕಂಬಿಗಳಿಗೆ ಹಾನಿಯಾಗಿದೆ. ಭಾರಿ ಮಳೆಗೆ ಆಗ್ರಾದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವಾರು ಪ್ರಾಣಿಗಳು ಮೃತಪಟ್ಟಿವೆ. ಗುಡುಗು ಸಹಿತ ಭಾರೀ ಮಳೆಗೆ ತಾಜ್ ಮಹಲ್ ನ ಒಂದು ಬಾಗಿಲು ಹಾನಿಗೀಡಾಗಿದ್ದು ಆವರಣದಲ್ಲಿ ಸುತ್ತಲು ಕೆಲ ಮರಗಳು ಬುಡಸಮೇತ ಉರುಳಿ ಬಿದ್ದಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸೂಪರಿಂಟೆಂಡೆಂಟ್ ಬಸಂತ್ ಕುಮಾರ್ ಸ್ವರ್ಣ್ ಕರ್ ತಿಳಿಸಿದ್ದಾರೆ. ಆಗ್ರಾ ಜಿಲ್ಲಾಡಳಿತವು ಮಳೆಯಿಂದ  ಮೃತರ ಕುಟುಂಬಸ್ಥರಿಗೆ ₹4 ಲಕ್ಷ ಪರಿಹಾರವನ್ನು ನೀಡಿವುದಾಗಿ ಹೇಳಿದೆ.

 

.

 

Please follow and like us:

Leave a Reply

Your email address will not be published. Required fields are marked *

Next Post

ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಪ್ರಕಟ

Sun May 31 , 2020
ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್’ನ್ನು ಪ್ರಕಟಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡುಸುತ್ತಿದ್ದಂತೆಯೇ ನೂತನ ಶೈಕ್ಷಣಿಕ ವರ್ಷದ ಕ್ಯಾಲೇಂಡರ್ ನ್ನು ಬಿಡುಗಡೆ ಮಾಡಲಾಗುತ್ತದೆ. ಎಸ್‌ಎಸ್‌ಎಲ್’ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.ಇನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುವುದು, ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ […]

Advertisement

Wordpress Social Share Plugin powered by Ultimatelysocial