ಮಕ್ಕಳಿಗೆ ಜ್ವರ ಬಂದಾಗ ನೀಡಿ ಉತ್ತಮ ಪ್ರೊಟೀನ್‌ ಯುಕ್ತ ʼಆಹಾರʼ

ಣ್ಣ ಮಕ್ಕಳ ಅಳುವಿನ ಕಾರಣವನ್ನು ತಿಳಿಯುವುದು ಬಹಳ ಕಷ್ಟ, ಅದರಲ್ಲೂ ನೆಗಡಿ, ಜ್ವರ ಕಾಡುವಾಗ ಯಾವ ಕಾರಣಕ್ಕೆ ಮಗು ರಚ್ಚೆ ಹಿಡಿಯುತ್ತದೆ ಎಂಬುದು ಅರಿವಾಗುವುದೇ ಇಲ್ಲ.

ಜ್ವರ ಬಂದಾಗ ಮಕ್ಕಳಲ್ಲಿ ಹಸಿವು ಕಡಿಮೆ ಆಗುತ್ತದೆ. ಅಗ ಮಕ್ಕಳಿಗೆ ಇಷ್ಟವಾಗುವ ಮತ್ತು ಪೌಷ್ಠಿಕಾಂಶಭರಿತ ಆಹಾರ ನೀಡಬೇಕು.

ಮಗುವಿಗೆ ಎದೆಹಾಲು ತಪ್ಪದೆ ಕೊಡುವುದರಿಂದ ಜ್ವರದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.

ಹೆಸರುಬೇಳೆಯ ದಾಲ್ ಕಿಚಡಿ ತಯಾರಿಸಿ ಕೊಡುವುದರಿಂದ ಸೋಂಕಿನ ವಿರುದ್ಧ ಹೋರಾಟ ಸುಲಭವಾಗುತ್ತದೆ. ಇದರಲ್ಲಿ ಪ್ರೊಟೀನ್ ಹೆಚ್ಚಿದೆ ಮತ್ತು ಸುಲಭದಲ್ಲಿ ಜೀರ್ಣವಾಗುತ್ತದೆ. ಯಾವುದೇ ಮಸಾಲೆ ಹಾಕದೆ ಇದನ್ನು ತಯಾರಿಸಿ. ಬಿಸಿ ಇರುವಾಗಲೇ ತಿನ್ನಲು ಕೊಡಿ.

ಗೆಣಸನ್ನು ಮಗುವಿನ ಅಹಾರದಲ್ಲಿ ಸೇರಿಸಿ. ಚೀನಿಕಾಯಿಯೂ ಈ ಅವಧಿಯಲ್ಲಿ ಉತ್ತಮ. ಬಿಸಿಯಾದ ಸೂಪ್ ಕುಡಿಸಿ. ಓಟ್ ಮೀಲ್ಸ್ ಉತ್ತಮ ಪ್ರೊಟೀನ್ ಹೊಂದಿದ್ದು, ಮಕ್ಕಳಿಗೆ ಶಕ್ತಿ ನೀಡುತ್ತದೆ.

ಸ್ವಲ್ಪ ಉಪ್ಪು ಮತ್ತು ಅರಶಿನ ಹಾಕಿ. ಇದರಿಂದ ಪ್ರತಿರೋಧಕ ಶಕ್ತಿ ಹೆಚ್ಚುವುದು. ಕ್ಯಾರೆಟ್, ಸೇಬು ಅಥವಾ ಇತರ ಹಣ್ಣು, ತರಕಾರಿಗಳ ಪ್ಯೂರಿ ತಯಾರಿಸಿ ತಿನ್ನಿಸಿ. ಬಾರ್ಲಿಯನ್ನು ಬೇಯಿಸಿ ಅದರ ಗಂಜಿ ಅಥವಾ ಸೂಪ್ ನೀಡಬಹುದು. ಬಾರ್ಲಿಯಲ್ಲಿರುವ ಪೋಷಕಾಂಶಗಳು ಮಗುವಿನ ದೇಹಕ್ಕೆ ಸಹಕಾರಿಯಾದುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಶುದ್ಧವಾದ ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ...!

Sun Feb 26 , 2023
ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ ಹಾಗೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸುಕ್ಕು ಮತ್ತು ಗೆರೆಗಳನ್ನು ಕಡಿಮೆ ಮಾಡುತ್ತದೆ. ಒತ್ತಡ, ತಲೆನೋವು ಮತ್ತು ಮೈಗ್ರೇನ್ ನಂಥ ಕಾಯಿಲೆಗಳಿವೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ಅರೋಮಾಥೆರಪಿಯಲ್ಲಿ ತಲೆನೋವಿಗೆ ಚಿಕಿತ್ಸೆ ಕೊಡಲು ಇದನ್ನು ಬಳಸುತ್ತಾರೆ. ಬಟ್ಟೆಯನ್ನು ರೋಸ್ ವಾಟರ್ […]

Advertisement

Wordpress Social Share Plugin powered by Ultimatelysocial