ಬ್ಯಾಟಿಂಗ್ ಮಾಡುವ ವೇಳೆ, ಹೀಗೆ ಪದೇ ಪದೇ ಗೊಣಗುತ್ತಿದ್ದ ಅಜಿಂಕ್ಯ ರಹಾನೆ: ಕಾರಣ ಏನ್ ಗೊತ್ತಾ?

ಬ್ಯಾಟಿಂಗ್ ಮಾಡುವ ವೇಳೆ, ಹೀಗೆ ಪದೇ ಪದೇ ಗೊಣಗುತ್ತಿದ್ದ ಅಜಿಂಕ್ಯ ರಹಾನೆ: ಕಾರಣ ಏನ್ ಗೊತ್ತಾ?

ಸೆಂಚುರಿಯನ್ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ಮೊದಲ ದಿನ ಉತ್ತಮ ಆರಂಭ ಪಡೆದಿರುವ ಟೀಂ ಇಂಡಿಯಾ, ಉತ್ತಮ ಮೊತ್ತ ಕಲೆಹಾಕುವ ಎಲ್ಲಾ ಮುನ್ಸೂಚನೆ ನೀಡಿದೆ. ಎರಡನೇ ದಿನದಾಟವು ಮಳೆಯಿಂದಾಗಿ ವಿಳಂಭವಾಗಿದ್ದರೂ, ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಬಡಿಸಿದೆ.

ಕೆ.ಎಲ್ ರಾಹುಲ್‌ ಭರ್ಜರಿ ಶತಕದ ಜೊತೆಗೆ ಮಯಾಂಕ್ ಅಗರ್ವಾಲ್ ಅರ್ಧಶತಕದ ಕೊಡುಗೆ ತಂಡದ ಮೊತ್ತ ಹೆಚ್ಚಿಸುವಲ್ಲಿ ಕಾರಣವಾಗಿದೆ. ಕೊಹ್ಲಿ ಇನ್ನಿಂಗ್ಸ್ 35 ರನ್‌ಗೆ ಮುಕ್ತಾಯಗೊಂಡ್ರೆ, ಚೇತೇಶ್ವರ ಪೂಜಾರ ಶೂನ್ಯಕ್ಕೆ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಆದ್ರೆ ಸಾಕಷ್ಟು ಟೀಕೆಗಳ ನಡುವೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯ ರಹಾನೆ ತಾಳ್ಮೆಯ ಅಜೇಯ 40ರನ್‌ಗಳ ಕೊಡುಗೆ ಟೀಂ ಇಂಡಿಯಾವನ್ನ ಸುಭದ್ರ ಸ್ಥಿತಿಗೆ ತಲುಪಿಸಿತ್ತು.

81 ಎಸೆತಗಳನ್ನ ಎದುರಿಸಿದ ಅಜಿಂಕ್ಯಾ 8 ಸೊಗಸಾದ ಬೌಂಡರಿಗಳ ಜೊತೆಗೆ ಅಜೇಯ 40 ರನ್ ಕಲೆಹಾಕಿ ಓಪನರ್ ಕೆ.ಎಲ್ ರಾಹುಲ್‌ಗೆ ಉತ್ತಮ ಸಾಥ್ ನೀಡಿದ್ರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 131 ಎಸೆತಗಳಲ್ಲಿ 73 ರನ್ ಕಲೆಹಾಕಿದೆ.

ಬ್ಯಾಟಿಂಗ್ ವೇಳೆ ಪದೇ ಪದೇ ಈ ಮಾತನ್ನ ಹೇಳುತ್ತಿದ್ದ ರಹಾನೆಟೀಕಾಕಾರರ ಬಾಯಿಗೆ ಆಹಾರವಾಗಿರುವ ಟೀಂ ಇಂಡಿಯಾ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಲೇಬೇಕೆಂಬ ಪಣತೊಟ್ಟಿದ್ದರು. ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ತನ್ನ ಸ್ಥಾನ ಉಳಿಸುಕೊಳ್ಳುವಲ್ಲಿ ರಹಾನೆ ಇನ್ನಿಂಗ್ಸ್ ಬಹಳ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಪ್ರತಿ ಎಸೆತವನ್ನ ಅತ್ಯಂತ ಜಾಗರೂಕತೆಯಿಂದ ಎದುರಿಸುತ್ತಿದ್ದ ಅಜಿಂಕ್ಯ ರಹಾನೆ ” ವಾಚ್ ದಿ ಬಾಲ್” ಎಂದು ತಮ್ಮಲ್ಲೇ ಗೊಣಗುತ್ತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

U19 Asia Cup: 7 ಸಿಕ್ಸರ್, ಒಂದೇ ಓವರ್‌ನಲ್ಲಿ 27 ರನ್! ಭಾರತ ವಿರುದ್ಧ ಅಬ್ಬರಿಸಿದ 18ರ ಹರೆಯದ ಅಫ್ಘಾನ್ ಬ್ಯಾಟರ್

Mon Dec 27 , 2021
U-19 Asia Cup: ಈ ಓವರ್‌ನಲ್ಲಿ ಇಜಾಜ್ 3 ಸಿಕ್ಸರ್ ಬಾರಿಸಿದರೆ, ಅವರ ಜೊತೆಗಾರ ಖೈಬರ್ ವಾಲಿ ಕೂಡ ಬೌಂಡರಿ ಬಾರಿಸಿ 27 ರನ್ ಗಳಿಸಿದರು. ಇಜಾಜ್ ಅಹ್ಮದ್ ಕೇವಲ 68 ಎಸೆತಗಳಲ್ಲಿ 86 ರನ್ ಗಳಿಸಿದರು.ಭಾರತ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದು, ಅಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಭಾರತದ ಎಲ್ಲಾ ಅಭಿಮಾನಿಗಳ ಕಣ್ಣು ಈ ಟೆಸ್ಟ್ ಸರಣಿಯ ಮೇಲಿದೆ. ಅದೇ ಸಮಯದಲ್ಲಿ, ಭಾರತದ ಜೂನಿಯರ್ ಕ್ರಿಕೆಟಿಗರು ಕೂಡ […]

Advertisement

Wordpress Social Share Plugin powered by Ultimatelysocial