ಕೊರೊನಾ ಬಂದಾಗಿನಿAದ ಲಾಕ್‌ಡೌನ್ ಅನ್ನೋ ಪದ ಜನಸಾಮಾನ್ಯರಿಗೂ ತಲುಪಿ ಬಿಟ್ಟಿದೆ. ಕೇಂದ್ರ ಸರ್ಕಾರ ದೇಶಾದ್ಯಂತ್ ಲಾಕ್‌ಡೌನ್ ವಿಧಿಸಿತ್ತು. ಇದೀಗ ಲಾಕ್‌ಡೌನ್ ಹೆಸರಿನಲ್ಲಿಯೆ ಸ್ಯಾಮಡಲ್‌ವುಡ್‌ನಲ್ಲಿ ಸಿನಿಮಾವೊಂದು ರೆಡಿಯಾಗ್ತಿದೆ.
ನಟ,ಸಂಕಲನಕಾರ, ನಾಗೇಂದ್ರ ಅರಸ್ ಅವರೆ ಸ್ವತಃ ಚಿತ್ರದಲ್ಲಿ ನಟಿಸುತ್ತಿದ್ದು, ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ಅವರೆ ಹೊತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಒಬ್ಬರೇ ಪಾತ್ರಧಾರಿ ಇರಲಿದ್ದಾರೆ. ಫೀಚರ್ ಮೂವಿ ಆಗಿದ್ದು, ಒಂದೂವರೆ ಗಂಟೆ ಅವಧಿಯಲ್ಲಿ ಸಿನಿಮಾ ಇರಲಿದೆ. ಸಿನಿಮಾ ಪೂರ್ತಿ ಒಂದು ಮನೆಯಲ್ಲಿ ನಡೆಯೊ ಕಥೆಯನ್ನು ಹೊಂದಿದ್ದು, ಶೂಟಿಂಗ್ ಕಂಪ್ಲಿಟ್ ಆಗಿದೆ. ಏಳು ದಿನದಲ್ಲಿ ೫ಜನ ತಂತ್ರಜ್ಞರು ಸೇರಿಕೊಂಡು ಶೂಟಿಂಗ್ ಮುಗಿಸಿದ್ದು, ಇಷ್ಟರಲ್ಲೆ ಟೀಸರ್ ಕೂಡ ರಿಲೀಸ್ ಆಗಲಿದೆ.
ತೆರೆಗೆ ಬರೋಕೆ ಸಿದ್ಧವಾಗ್ತಿದೆ ಲಾಕ್‌ಡೌನ್ ಸಿನಿಮಾ

Please follow and like us: