ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಮೂಲಕ ಕೊರೊನಾ ಹಾಟ್ ಸ್ಪಾಟ್ ಆಯ್ತಾ ಫಸ್ಟ್ ನ್ಯೂರೋ ಆಸ್ಪತ್ರೆ…? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ. ಕೊರೊನಾ ಸೋಂಕಿತ ಪಿ – 390 ರ ಮಹಿಳೆಯಿಂದ ವೃದ್ದನಿಗೆ ಸೋಂಕು ತಗುಲಿದೆ. ಅಲ್ಲದೇ ಪಿ – 578 ನಂಬರ್ ಸೋಂಕಿತನಿಂದ ಮತ್ತೆ ಮೂವರಿಗೆ ಕೊರೊನಾ ಸೋಂಕು ಹರಡಿದೆ. ಸದ್ಯ ಜಿಲ್ಲೆಯಲ್ಲಿ 2 ಹಾಟ್ ಸ್ಪಾಟ್ ಗುರ್ತಿಸಲಾಗಿದೆ. ಈ ಹಾಟ್ ಸ್ಪಾಟ್ ಏರಿಯಾಗಳಿಂದ ಒಟ್ಟು 36 ಜನರಿಗೆ ಕೊರೊನಾ ಸೋಂಕು ಹರಡಿದೆ ಎನ್ನಲಾಗ್ತಿದೆ. ಅಲ್ಲದೇ ಇಂದು ಹೊಸದಾಗಿ 7 ಜನರಿಗೆ ಸೋಂಕು ತಗುಲಿದೆ. 2 ವರ್ಷದ ಹೆಣ್ಣು ಮಗು, 1 ವರ್ಷದ ಗಂಡು ಮಗು ಸೇರಿದಂತೆ 65 ವರ್ಷದ ವೃದ್ದನಿಗೆ ಕೂಡ ಕೊರೊನಾ ಸೋಂಕು ಧೃಡಪಟ್ಟಿದೆ.
ದಕ್ಷಿಣ ಕನ್ನಡಕ್ಕೆ ಕಂಟಕವಾದ ಹಾಟ್ ಸ್ಪಾಟ್ ಏರಿಯಾ..! ಒಂದೇ ದಿನ 7 ಜನರಿಗೆ ಸೋಂಕು
Please follow and like us: