ನವದೆಹಲಿ: ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ದೇಶದ ಹಲವೆಡೆ ಇಂದು ಕೆಲವು ಕಠಿಣ ನಿರ್ಬಂಧಗಳೊಂದಿಗೆ ದೇವಾಲಯಗಳು, ಹೋಟೆಲ್, ರೆಸ್ಟೋರೆಂಟ್‍ಗಳು ತೆರೆದಿವೆ. ಆದರೆ, ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಭೀತಿಯಿಂದಾಗಿ ದೇವಸ್ಥಾಗಳು ಮತ್ತು ಹೋಟೆಲ್-ರೆಸ್ಟೋರೆಂಟ್‍ಗಳಿಗೆ ಬೀಗ ಮುದ್ರೆಗಳನ್ನು ಮುಂದುವರೆಸಲಾಗಿದೆ. ಇಂದಿನಿಂದ ದೇಶದ ಬಹುತೇಕ ನಗರಗಳ ಪ್ರಸಿದ್ಧ ದೇವಾಲಯಗಳಿಗೆ ಜನರು ತೆರಳಿ ಶ್ರದ್ಧಾಭಕ್ತಿಯಿಂದ ನಮನ ಸಲ್ಲಿಸಿದರು. ತೀರ್ಥ, ಪ್ರಸಾದದ ವಿನಿಯೋಗ ಮತ್ತು ಪವಿತ್ರಜಲ ಪ್ರೋಕ್ಷಣೆ ನಿರ್ಬಂಧಿಸಿದ ಕಾರಣ ಜನರು ದೇವರ ದರ್ಶನ ಮಾತ್ರ ಮಾಡಿ ನಮಸ್ಕರಿಸಿದರು. ಅನಾರೋಗ್ಯ ಪೀಡಿತರು, ವೃದ್ಧರು, 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಕೊರೊನಾ ಸಂಕಷ್ಟದಿಂದ ನಮ್ಮನ್ನು ಪಾರು ಮಾಡುವಂತೆ ಭಗವಂತನಿಗೆ ಹರಕೆ ತೀರಿಸುತ್ತಿದ್ದುದು ಎಲ್ಲೆಡೆ ಕಂಡು ಬಂತು. ಆದರೆ ಕೆಲವು ರಾಜ್ಯಗಳು ಮತ್ತು ಕೊರೊನಾ ಹೆಚ್ಚಾಗಿರುವ ನಗರಗಳಲ್ಲಿ ದೇವಸ್ಥಾನಗಳು, ಮಠಮಂದಿರಗಳು, ಹೋಟೆಲ್-ರೆಸ್ಟೋರೆಂಟ್‍ಗಳ ಸ್ತಗಿತವನ್ನು ಮುಂದುವರೆಸಲಾಗಿದೆ.
ದೇಶದ ಹಲವೆಡೆ ಮಂದಿರಗಳು, ಹೋಟೆಲ್ ಗಳು ಆರಂಭ

Please follow and like us: