ಬೀದರ್: ಪ್ರವಾಸಿ ವೀಸಾ ಮುಗಿದರೂ ಧರ್ಮ ಪ್ರಚಾರದಲ್ಲಿ ತೊಡಗಿದ್ದ 10 ಕಿರ್ಗಿಸ್ತಾನ ಪ್ರಜೆಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಜೂನ್ 16 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೀದರ್ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇವರೆಲ್ಲ ವೀಸಾ ಅವಧಿ ಮುಗಿದರೂ ಬೀದರ್ ನಲ್ಲಿ ಉಳಿದುಕೊಂಡು ಧರ್ಮ ಪ್ರಚಾರ ನಡೆಸಿದ್ದರು. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ತಿಂಗಳ ಕ್ವಾರಂಟೈನ್ ಬಳಿಕ ಕೋರ್ಟಿಗೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ.
ಧರ್ಮ ಪ್ರಚಾರ ಮಾಡುತ್ತಿದ್ದ 10 ಜನರ ಬಂಧನ

Please follow and like us: