ಮುಸ್ಲಿಂ ಆಧ್ಯಾತ್ಮಿಕ ಗುರು ಖ್ವಾಜಾ ಸಯ್ಯದ್ ಚಿಶ್ತಿ ಅವರನ್ನು ಗುಡು ಹಾರಿಸಿ ಹತ್ಯೆ!

ನಾಸಿಕ್​ (ಮಹಾರಾಷ್ಟ್ರ): ಸೂಫಿ ಬಾಬಾ ಎಂದೇ ಖ್ಯಾತರಾಗಿದ್ದ ಅಫ್ಘಾನಿಸ್ತಾನ ಮೂಲದ ಮುಸ್ಲಿಂ ಆಧ್ಯಾತ್ಮಿಕ ಗುರು ಖ್ವಾಜಾ ಸಯ್ಯದ್ ಚಿಶ್ತಿ ಅವರನ್ನು ದುಷ್ಕರ್ಮಿಗಳು ಗುಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು.

ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ನಾಸಿಕ್​ ಬಳಿಯ ಯೋಲಾ ಪಟ್ಟಣದ ಎಂಐಡಿ ಪ್ರದೇಶದ ಬಳಿ ಈ ಘಟನೆ ನಡೆದಿದೆ.

ಬಾಬಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಕೊಲೆಯಾದ ನಂತರ ಆರೋಪಿಗಳು ಎಸ್‍ಯುವಿ ಕಾರಿನಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖ್ವಾಜಾ ಸಯ್ಯದ್ ಚಿಶ್ತಿ ಹಲವಾರು ವರ್ಷಗಳಿಂದ ನಾಸಿಕ್‍ನ ಯೋಲಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಸೂಫಿ ಬಾಬಾನ ಚಾಲಕನೇ ಈ ಘಟನೆಯ ಪ್ರಮುಖ ಆರೋಪಿ ಎನ್ನಲಾಗಿದೆ. ಈ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಲಿಕಾನ್‌ ಸಿಟಿ ಈಗ ʻ ಗಾರ್ಬೇಜ್‌ ಸಿಟಿ ʼ ಆಗಿದೆ !

Wed Jul 6 , 2022
  ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರನ್ನು ಐಟಿಸಿಟಿ, ಸಿಲಿಕಾನ್‌ ಸಿಟಿ, ಮೆಟ್ರೋ ಸಿಟಿ ಹೀಗೆ ಅನೇಕ ಹೆಸರುಗಳಿಂದ ಕರೆಯುವ ಜತೆಗೆ ಇತ್ತಿಚೆಗೆ ಕಸಗಳು ಹೆಚ್ಚಾಗುತ್ತಿರೋದಕ್ಕೆ ʻ ಗಾರ್ಬೇಜ್‌ ಸಿಟಿ ʼ ಎಂಬ ಕರೆಯುವ ಶುರು ಮಾಡಲಾಗ್ತಿದೆ. ಈ ಹೆಸರಿಗೆ ಬ್ರೇಕ್‌ ಹಾಕೋದಲ್ಲಿ ಬಿಬಿಎಂಪಿ ಎಗ್ಗಿಲ್ಲದ ಸರ್ಕಸ್‌ ಮಾಡ್ತಿದೆ. ಇದೀಗ ನಿತ್ಯವೂ ಕಸದ ತಾಣಗಳಾಗುವ ಸ್ಥಳಗಳನ್ನು ಕಸರಹಿತವನ್ನಾಗಿಸಲು ಬಿಬಿಎಂಪಿ ಹೊಸ ಮಾಸ್ಟರ್‌ ಪ್ಲ್ಯಾನ್ ಯೋಜನೆಯುನ್ನು ರೂಪಿಸಿದೆ. ಇದರಲ್ಲಿ ನಾಗರಿಕರೂ ಭಾಗವಹಿಸಿದರೆ ಅವರಿಗೆ […]

Advertisement

Wordpress Social Share Plugin powered by Ultimatelysocial