500 ಮಂದಿಗೆ ಪ್ರತಿ ಲೀಟರ್​ಗೆ ಕೇವಲ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ !

 

ಪುಪುಣೆ: ಇಂಧನ ದರ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್​ 14ರ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿಯ ಅಂಗವಾಗಿ ಮಹಾರಾಷ್ಟ್ರದ ಸ್ಥಳೀಯ ಸಂಘಟನೆಯೊಂದು 500 ಮಂದಿಗೆ ಪ್ರತಿ ಲೀಟರ್​ಗೆ ಕೇವಲ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಈ ವಿನೂತನ ಪ್ರಸಂಗ ಮಹಾರಾಷ್ಟ್ರ ಸೊಲ್ಲಾಪುರ ನಗರದಲ್ಲಿ ನಡೆದಿದೆ. ಪ್ರತಿ ಖರೀದಿದಾರರನಿಗೆ ಕೇವಲ ಒಂದು ಲೀಟರ್​ ಪೆಟ್ರೋಲ್​ ಅನ್ನು 1 ರೂಪಾಯಿಗೆ ನೀಡಿದ್ದಾರೆ. ಇದರಿಂದ ನಿನ್ನೆ ಪೆಟ್ರೋಲ್​ ಬಂಕ್​ನಲ್ಲಿ ಭಾರೀ ಕ್ಯೂ ನಿರ್ಮಾಣವಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಈ ವಿನೂತನ ಪ್ರತಿಭಟನೆಯನ್ನು ಡಾ. ಬಿ.ಆರ್​. ಅಂಬೇಡ್ಕರ್​ ವಿದ್ಯಾರ್ಥಿ ಮತ್ತು ಯುವ ಪ್ಯಾಂಥರ್ಸ್​ ಸಂಘಟನೆ ಹಮ್ಮಿಕೊಂಡಿತ್ತು.

ದೇಶದಲ್ಲಿ ಹಣದುಬ್ಬರ ತೀವ್ರವಾಗಿ ಏರಿಕೆಯಾಗಿದೆ. ನರೇಂದ್ರ ಮೋದಿ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 120 ರೂಪಾಯಿ ತಲುಪಿದೆ. ಆದ್ದರಿಂದ ಜನರಿಗೆ ಪರಿಹಾರ ನೀಡಲು ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿನೂತನವಾಗಿ ಆಚರಿಸಲು ನಾವು ಒಂದು ರೂಪಾಯಿ ದರದಲ್ಲಿ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇವೆ ಎಂದು ಸಂಘಟನೆಯ ರಾಜ್ಯ ಘಟಕದ ಮುಖಂಡ ಮಹೇಶ್​ ಸರ್ವಗೌಡ ತಿಳಿಸಿದ್ದಾರೆ.

ನಮ್ಮಂತಹ ಸಣ್ಣ ಸಂಸ್ಥೆ 500 ಜನರಿಗೆ ಪರಿಹಾರ ನೀಡಿದರೆ, ಸರ್ಕಾರವೂ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು. ಈ ಬೆಲೆಗೆ ಪೆಟ್ರೋಲ್ ಖರೀದಿಸಲು ನನಗೆ ಖುಷಿಯಾಗಿದೆ. ಹಣದುಬ್ಬರದ ನಡುವೆಯೂ ನಾನು ಸ್ವಲ್ಪ ಹಣವನ್ನು ಉಳಿಸಿದ್ದೇನೆ ಎಂದು ಖರೀದಿದಾರರೊಬ್ಬರು ಸಂತಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಪಿಜಿ ಸಿಲಿಂಡರ್‌ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.!

Fri Apr 15 , 2022
  ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಲಿಂಡರ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಚೌಕಾಕಾರದಲ್ಲಿ ಕತ್ತರಿಸಿ ದ್ವಾರ ಮಾಡಿಕೊಂಡು, ಅದರೊಳಗೆ 50 ಲೀಟರ್ ಮದ್ಯವನ್ನು ಶೇಖರಿಸಿದ್ದು, ಇದೀಗ ಪೋಲೀಸರು ಮಾಲು ಸಹಿತ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಬಿಹಾರದ ಪಾಟ್ನಾದ ಕದಮ್ ಘಾಟ್ ಪ್ರದೇಶದ ಬಳಿ ನಡೆದಿದೆ. ಭೂಷಣ್ ರೈ ಎಂಬಾತ ಈ ಕೃತ್ಯದಲ್ಲಿ ತೊಡಗಿದ್ದ. ಸಿಲಿಂಡರ್‌ನೊಳಗೆ ಮದ್ಯವನ್ನು ಪ್ರದರ್ಶಿಸಿದ ಪೊಲೀಸರ ವಿಡಿಯೊವನ್ನು ಟ್ವೀಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಇಂತಹ […]

Advertisement

Wordpress Social Share Plugin powered by Ultimatelysocial