ವೆಬ್ ಸೀರಿಸ್ನ ದೃಶ್ಯವೊಂದರಲ್ಲಿ ಮಹಿಳೆಯ ನಡತೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದ್ದು, ಆ ಮಹಿಳೆ ಮೇಘಾಲಯದ ಖಾಸಿ ಸಮುದಾಯಕ್ಕೆ ಸೇರಿದವಳೆಂದು ತೋರಿಸಿರುವುದರಿಂದ ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ವಿರುದ್ಧ ಗೋರ್ಖಾ ಸಂಘಟನೆಯೊAದು ದೂರು ದಾಖಲಿಸಿದೆ. ಅನುಷ್ಕಾ ನಿರ್ಮಾಣದ ಪಾತಾಳ್ ಲೋಕ ವೆಬ್ ಸಿರೀಸ್ನಲ್ಲಿ ಸಮುದಾಯದ ವಿರುದ್ಧ ವರ್ಣಬೇಧ ನೀತಿಯನ್ನ ತೋರಿಸುವಂತಿದೆ. ಇದರಿಂದ ನಮ್ಮ ಸಮುದಾಯವನ್ನು ನಿಂದಿಸುವAತಹ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಆಲ್ ಅರುಣಾಚಲ ಪ್ರದೇಶ ಯೂತ್ ಗೂರ್ಖಾ ಅಸೋಸಿಯೇಷನ್, ರಾಷ್ಟಿçÃಯ ಮಾನವ ಹಕ್ಕು ಆಯೋಗಕ್ಕೆ ಆನ್ಲೈನ್ ಮೂಲಕ ದೂರು ನೀಡಿದೆ. ಸುದೀಪ್ ಶರ್ಮಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಾತಾಳ್ ಲೋಕ್ ವೆಬ್ ಸಿರೀಸ್ ಹೆಸರಾಂತ ಪತ್ರಕರ್ತನೊಬ್ಬನ ಸುತ್ತ ನಡೆಯುವ ಕೊಲೆಯತ್ನದ ಕಥಾಹಂದರವುಳ್ಳ ಕಥೆಯಾಗಿದ್ದು, ಅಭಿಷೇಕ್ ಬ್ಯಾನರ್ಜಿ, ನೀರಜ್ ಕಬಿ, ಗುಲ್ ಪನಾಗ್ ಮತ್ತಿರರು ನಟಿಸುತ್ತಿದ್ದಾರೆ.
ನಟಿ ಅನುಷ್ಕಾ ಶರ್ಮಾ ವಿರುದ್ಧ ದೂರು

Please follow and like us: