ನಟಿ ಸಮೀರಾ ರೆಡ್ಡಿ ತೆಲುಗು ಚಿತ್ರರಂಗದಿಂದ ದೂರ…!?

ನಾನು ಚಿತ್ರರಂಗ ಬಿಡೋದಕ್ಕೆ ಎನ್ ಟಿಆರ್ ಕಾರಣ ಅಂತ ಖ್ಯಾತ ನಟಿ ಸಮೀರಾ ರೆಡ್ಡಿ ಆರೋಪಿಸಿದ್ದಾರೆ. ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಸಾಕಷ್ಟು ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರು.. ಸಮೀರಾ ಚಿತ್ರರಂಗ ಪ್ರವೇಶಿಸಿದ್ದು 2002ರಲ್ಲಿ. ಅಲ್ಲಿಂದ ಹನ್ನೊಂದು ವರ್ಷ ಚಿತ್ರರಂಗದಲ್ಲಿದ್ದರು. ಈಕೆಗೆ ಹಿಂದಿ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳಿದ್ದಾಗ,ದಕ್ಷಿಣ ಭಾರತೀಯ ಸಿನಿಮಾಗಳಿಂದಲೂ ಅವಕಾಶಗಳು ಅರಸಿ ಬಂದವು.  ಮೂಲತಃ ತೆಲುಗು ಕುಟುಂಬದವರಾದರೂ ತೆಲುಗು ಚಿತ್ರರಂಗದಲ್ಲಿ ಅವರು ಉಳಿಯಲಿಲ್ಲ. ಅದಕ್ಕೆ ಕಾರಣ ಜೂನಿಯರ್ ಎನ್ ಟಿ ಆರ್ ಜತೆಗಿನ ಒಂದು ಸಿನಿಮಾ. 2006ರಲ್ಲಿ ಸುರೇಂದರ್ ರೆಡ್ಡಿ ನಿರ್ದೇಶನದ ತೆಲುಗು ರೊಮ್ಯಾಂಟಿಂಗ್ ಆಕ್ಷನ್ ಚಿತ್ರ ‘ಅಶೋಕ್’ದಲ್ಲಿ ಜೂನಿಯರ್ ಎನ್ ಟಿಆರ್ ಜತೆ ಸಮೀರಾ ರೆಡ್ಡಿ ನಟಿಸಿದ್ದರು. ಎನ್ಟಿಆರ್ ಸಾಮಾನ್ಯವಾಗಿ ನಟಿಯರೊಂದಿಗಿನ ಗಾಸಿಪ್ನಿಂದ ದೂರ ಇರುವವರು. ಆದರೆ ಸಮೀರಾ ರೆಡ್ಡಿ ಜತೆ ಅವರ ಹೆಸರು ತುಂಬಾ  ಕೇಳಿ ಬರತೊಡಗಿತ್ತು. ಸಮೀರಾ ರೆಡ್ಡಿ, ಜೂನಿಯರ್ ಎನ್ಟಿಆರ್ ಜತೆಗೆ ಹೆಚ್ಚು ಆತ್ಮೀಯತೆಯಿಂದ ವರ್ತಿಸುತ್ತಿದ್ದರು. ಇದರಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಕಾಲಿವುಡ್ನಲ್ಲಿ ಹರಿದಾಡುತ್ತಿತ್ತು.. ಚಿತ್ರದ ಬಿಡುಗಡೆ ಸಂದರ್ಭದಲ್ಲಿಯಂತೂ ಅದು ದಟ್ಟವಾಗಿತ್ತು. ಆದರೆ ಸಿನಿಮಾ ಬಿಡುಗಡೆಯ ನಂತರ ತಣ್ಣಗಾಯಿತು. ಸಂದರ್ಶನವೊಂದರಲ್ಲಿ, ಜೂನಿಯರ್ ಎನ್ಟಿಆರ್ ಸ್ವಭಾವದ ಬಗ್ಗೆ ಮಾತನಾಡಿದ್ದ ಸಮೀರಾ, ‘ಅವರು ತಮ್ಮಷ್ಟಕ್ಕೆ ತಾವು ಇರುವ ವ್ಯಕ್ತಿ ಎಂದು ಅನೇಕರು ಹೇಳಿದ್ದನ್ನು ಕೇಳಿದ್ದೆ. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಶೂಟಿಂಗ್ ಮುಗಿದ ಬಳಿಕ ಅವರು ನಮ್ಮೊಂದಿಗೆ ಮಾತನಾಡುವುದಿಲ್ಲ. ಹಾಗಾಗಿ ನನ್ನೊಂದಿಗೆ ಮಾತನಾಡಲೂ ಬಹಳ ಸಮಯ ತೆಗೆದುಕೊಂಡರು. ನಾವು ಹೇಗೋ ಒಳ್ಳೆಯ ಸ್ನೇಹಿತರಾದೆವು. ಆದರೆ ನಮ್ಮ ಸ್ನೇಹವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು’ ಎಂದು ಬೇಸರಗೊಂಡಿದ್ದರು. ಈ  ವದಂತಿ ಹರಡಿದಾಗ ಸಮೀರಾ ಕುಟುಂಬದಲ್ಲಿ ತಳಮಳ ಶುರುವಾಗಿತ್ತಂತೆ. ‘ಈ ಪ್ರಶ್ನೆಗಳನ್ನು ಅಪ್ಪ ಪದೇ ಪದೇ ಕೇಳಲು ಆರಂಭಿಸಿದಾಗ ತೆಲುಗು ಸಿನಿಮಾದಿಂದಲೇ ದೂರ ಸರಿಯಲು ನಿರ್ಧರಿಸಿದೆ. ಚಿತ್ರರಂಗದಲ್ಲಿ ಅತಿಯಾದ ಮಾತುಗಳು ಕೇಳಿ ಬರುತ್ತಿದ್ದವು. ಜೂ.ಎನ್ಟಿಆರ್ ಅವರನ್ನು ಮದುವೆಯಾಗುತ್ತಾರಾ? ಅಥವಾ ನೀವು ಅವರನ್ನು ಮದುವೆಯಾಗುತ್ತೀರಾ?. ಜನರು ನಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದರು. ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ನಾನು ಯಾವುದರಲ್ಲಿ ಸಾಮರ್ಥ್ಯ ಹೊಂದಿದ್ದೇನೂ ಅದರ ಬಗ್ಗೆ ಮಾತನಾಡಲಿಲ್ಲ. ಅವರ ಗಮನ ಸಮೀರಾ ರೆಡ್ಡಿಯಿಂದ ಸಮೀರಾ ಎನ್ಟಿಆರ್ ಕಡೆಗೆ ತಿರುಗಿತ್ತು’ ಹಾಗಾಗಿ ತಮಿಳು ಸಿನಿಮಾಗಳತ್ತ ಗಮನ ಹರಿಸಲು ನಿರ್ಧರಿಸಿದೆ. ಏಕೆಂದರೆ ನನಗೆ ನನ್ನದೇ ಆದ ಐಡೆಂಟಿಟಿ ಬೇಕಿತ್ತು. ‘ವಾರನಂ ಆಯಿರಂ’ ಭರ್ಜರಿ ಹಿಟ್ ಆಯ್ತು. ಅಜಿತ್, ವಿಶಾಲ್ ಜತೆಗೆ ಸಿನಿಮಾ ಮಾಡಿದೆ. ಗೌತಮ್ ಮೆನನ್ ಜತೆಗೂ ಕೆಲಸ ಆರಂಭಿಸಿದೆ’. ‘ಈ ರೀತಿಯ ಸನ್ನಿವೇಶವನ್ನು ಈ ಹಿಂದೆ ಎಂದೂ ಎದುರಿಸಿರಲಿಲ್ಲ. ಜೂ. ಎನ್ಟಿಆರ್ ಅವರಿಗೂ ಈ ವಿಚಾರದಲ್ಲಿ ನೋವಾಗಿತ್ತು ಎನ್ನುವುದು ಗೊತ್ತು. ‘ಅಶೋಕ ಚಿತ್ರದ ಬಳಿಕ ಅವರಿಂದ ನಾನು ಅಂತರ ಕಾಯ್ದುಕೊಂಡೆ. ಅವರ ಜತೆ ಮತ್ತೆ ಮಾತನಾಡಲೇ ಇಲ್ಲ. ಅದರಿಂದ ಮಾತ್ರವೇ ಈ ರೂಮರ್ ತಡೆಯಲು ಸಾಧ್ಯ ಎನ್ನುವುದು ನನಗೆ ಗೊತ್ತಿತ್ತು. ಈಗಲೂ ಗೌತಮ್ ಮೆನನ್, ಸಂಜಯ್ ದತ್, ಅನಿಲ್ ಕಪೂರ್ ಅಥವಾ ಕೆಲಸ ಮಾಡಿದ ಯಾರೊಂದಿಗಾದರೂ ಫೋನ್ನಲ್ಲಿ ಮಾತನಾಡಬಲ್ಲೆ. ಆದರೆ ಎನ್ಟಿಆರ್ ವಿಚಾರ ತೀವ್ರ ನಾಟಕ ಶುರುಮಾಡಿತ್ತು. ಹೀಗಾಗಿ ನಾನು ಅದನ್ನು ನಿಲ್ಲಿಸಿಬಿಟ್ಟೆ’ ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ಅಮೇರಿಕಾ ಆರೋಪ ತಳ್ಳಿ ಹಾಕಿದ WHO

Sat May 2 , 2020
ನ್ಯೂಯಾರ್ಕ್ : ಕೊರೊನಾ ವೈರಸ್ ಹುಟ್ಟಿದ್ದು ವುಹಾನ್ ಪ್ರಯೋಗಾಲಯದಲ್ಲೇ ಎಂದು ಆರೋಪಿಸಿದ ಬೆನ್ನಲ್ಲೇ, ವುಹಾನ್ ನಗರದಲ್ಲಿ ಏಕಾಏಕಿ ಹರಡಿದ ಕೊರೊನಾ ವೈರಸ್ ಪರಿಸ್ಥಿತಿಯನ್ನು ಚೀನಾ, ತಪ್ಪಾಗಿ ನಿರ್ವಹಿಸಿದೆ ಎಂದು ಶ್ವೇತಭವನ(ಡಬ್ಲೂಹೆಚ್‌ಒ) ಆರೋಪಿಸಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ಕೊರೊನಾ ವೈರಸ್, ಇದುವರೆಗೆ ೬೪,೦೦೦ ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ ಸುಮಾರು ೨,೪೦,೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ವಿಶ್ವದಾದ್ಯಂತ ೩೪ […]

Advertisement

Wordpress Social Share Plugin powered by Ultimatelysocial