ಶ್ವೇತಾ ಶ್ರೀವಾತ್ಸವ್ ಮಗಳ ಬರ್ತ್ ಡೇ

ಸೆಲಬ್ರಿಟಿಗಳ ಜೀವನ ಅಂದ್ರೆ ಯಾವಾಗಲೂ ಕಲರ್​​​​​​​​​​​​​​​​​​​​​​​​​​​​​​​ಫುಲ್ ಆಗಿರುತ್ತದೆ. ಯಾವುದಾದರೂ ಸಭೆ, ಸಮಾರಂಭ ಎಂದರೆ ಸಾಕು ಸೆಲಬ್ರಿಟಿಗಳು ಎಂದಿಗಿಂತ ಸಖತ್ ಮಿಂಚುತ್ತಾರೆ. ಅಲ್ಲದೆ ಅವರ ಯೋಚನೆಗಳು ಕೂಡಾ ಬಹಳ ವಿಭಿನ್ನವಾಗಿರುತ್ತದೆ. ಏನೇ ಕೆಲಸ ಮಾಡಿದರೂ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಮುನ್ನುಗ್ಗುವ ಸೆಲಬ್ರಿಟಿಗಳು ಲಾಕ್​​ ಡೌನ್​​​​ನಲ್ಲಿ ಕೂಡಾ ಸುಮ್ಮನೆ ಕೂರುವ ಜಾಯಮಾನದವರಲ್ಲ. ಅದೇ ಸಾಲಿಗೆ ಸಿಂಪಲ್ ಸುಂದ್ರಿ ಶ್ವೇತಾ ಶ್ರೀವಾತ್ಸವ್ ಕೂಡಾ ಸೇರುತ್ತಾರೆ. ಸೊಶೀಯಲ್  ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ಶ್ವೇತಾ ಏನಾದರೂ ಕೆಲಸ ಮಾಡುತ್ತಿರುತ್ತಾರೆ. ಇಂದು ಈ ಸಿಂಪಲ್ ಸುಂದರಿಯ ಮುದ್ದು ಮಗಳ ಮೂರನೇ ವರ್ಷದ ಹುಟ್ಟುಹಬ್ಬ. ಮಗಳು ಅಶ್ಮಿತಾ ಶ್ರೀವಾತ್ಸವ್ ಹುಟ್ಟುಹಬ್ಬಕ್ಕೆ ಶ್ವೇತಾ ಸ್ಪೆಷಲ್ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಮಗಳ ಬರ್ತ್​ಡೇ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪ್ಲ್ಯಾನ್ ಮಾಡಿದ್ದಾರೆ. ಹುಟ್ಟುಹಬ್ಬ ಬಹಳ ಸಿಂಪಲ್ ಆಗಿದ್ದರೂ ಶ್ವೇತಾ ತನ್ನ ಮಗಳೊಂದಿಗೆ ಮಿಂಚಿದ್ದಾರೆ. ಮಗಳ ಡ್ರೆಸ್​​, ತನ್ನ ಡ್ರೆಸ್​​ ಮ್ಯಾಚ್ ಆಗುವಂತೆ ಮೊದಲೇ ಪ್ಲ್ಯಾನ್ ಮಾಡಿ ಶ್ವೇತಾ ಫೋಟೋಶೂಟ್ ಮಾಡಿಸಿ ಮಗಳ ಹುಟ್ಟುಹಬ್ಬವನ್ನು ಎಂಜಾಯ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡಲ್ಲ

Wed Jul 22 , 2020
ಸರ್ಕಾರದ ವಿರುದ್ಧ ನಾನು ಸುಖಾಸುಮ್ಮನೆ ಆರೋಪ ಮಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ  ಮಾತನಾಡಿದ ಅವರು,ದಾಖಲೆ ಇಟ್ಟು ನಾನು ಮಾತಾಡುತ್ತೇನೆ .ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಜನತೆಯ ದುರಾದೃಷ್ಟ ಪ್ರವಾಹ ಮತ್ತು ಕೋವಿಡ್ ಅನುಭವಿಸುತ್ತಿದ್ದಾರೆ. ಸರ್ಕಾರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಸರ್ಕಾರದ ವೈಫಲ್ಯಗಳನ್ನ ನಾವು ಮನೆಮನೆಗೆ ತಲುಪಿಸಬೇಕಿದೆ. ಕಾರ್ಯಕರ್ತರು ಈ ವಿಷಯವನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. Please follow and like […]

Advertisement

Wordpress Social Share Plugin powered by Ultimatelysocial