ಬೀದರ್ : ಇಂದು ಮನುಷ್ಯ ಭೌತಿಕ ಸುಖದತ್ತ ಸಾಗುತ್ತಿರುವುದು ಹಾಗೂ ಪರಿಸರದ ಮೇಲಿನ ಕಾಳಜಿ ಕಡಿಮೆ ಆಗುತ್ತಿರುವ ಪರಿಣಾಮ ಅರಣ್ಯ, ಹಸಿರು ಪ್ರದೇಶ ಕುಸಿಯುತ್ತಿದೆ ಎಂದು ಶಾಸಕ ಈಶ್ವರ ಖಂಡ್ರೆ ಆತಂಕ ವ್ಯಕ್ತ ಪಡಿಸಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯ ಭಾಲ್ಕಿ ವತಿಯಿಂದ ಗುರುವಾರ ಆಯೋಜಿಸಿದ್ದ ರೈತರು, ಸಾರ್ವಜನಿಕರಿಗೆ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಲ್ಕಿ ತಾಲೂಕಿನಲ್ಲಿ ಈ ಬಾರಿ ಸುಮಾರು 1.5 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ . ಪರಿಸರ ರಕ್ಷಿಸಿದರೇ ಮಾತ್ರ ನಮ್ಮತನ, ಮುಂದಿನ ಉಳಿವು ಸಾಧ್ಯ ಎನ್ನುವುದು ಎಲ್ಲರೂ ಅರಿತು ಹೆಚ್ಚೆಚ್ಚು ಗಿಡಗಳನ್ನು ಪೋಷಿಸುವುದರ ಜತೆಗೆ ಮಕ್ಕಳಲ್ಲಿ ಪರಿಸರದ ಅಗತ್ಯತೆ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕಿದೆ ಎಂದು ಖಂಡ್ರೆ ಹೇಳಿದರು.
ಪರಿಸರದ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ

Please follow and like us: