ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ.

ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ. ಆದ್ರೆ ಬಹುತೇಕರ ತೂಕ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯಾಗೋದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಸುಂದರ ಗುಲಾಬಿ ಹೂ ನಿಮಗೆ ನೆರವಾಗಬಹುದು.

ಯಸ್, ಗುಲಾಬಿ ಹೂವಿನಲ್ಲಿರುವ ಲ್ಯಾಕ್ಸೆಟಿವ್ ಗುಣ ನಿಮ್ಮ ಚಯಾಪಚಯವನ್ನು ಸರಿಪಡಿಸುತ್ತದೆ.

ಹಾಗೆ ಹೊಟ್ಟೆಯಲ್ಲಿರುವ ಟಾಕ್ಸಿನ್ ತೆಗೆದುಹಾಕುತ್ತದೆ. ಚಯಾಪಚಯ ವೇಗವಾಗಿ ನಡೆಯುವುದ್ರಿಂದ ಕ್ಯಾಲೋರಿ ವೇಗವಾಗಿ ಕಡಿಮೆಯಾಗುತ್ತದೆ. ಇದು ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ.

ಆಯುರ್ವೇದದಲ್ಲಿ ಗುಲಾಬಿ ಎಸಳನ್ನು ಔಷಧಿಗಾಗಿ ಬಳಸ್ತಾರೆ. ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟು ಸುಸ್ತಾಗಿದ್ದರೆ ನೀವು ಗುಲಾಬಿಯನ್ನು ಬಳಸಿನೋಡಿ.

ಮೊದಲು 10-15 ಗುಲಾಬಿ ದಳವನ್ನು ಸ್ವಚ್ಛಗೊಳಿಸಿ. ಒಂದು ಲೋಟ ನೀರಿಗೆ ದಳವನ್ನು ಹಾಕಿ ಕುದಿಸಿ. ನೀರಿನ ಬಣ್ಣ ಕಂದು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದ ನಂತ್ರ ನೀರಿಗೆ ಚಿಟಕಿ ಏಲಕ್ಕಿ ಪುಡಿ ಹಾಗೂ ಜೇನುತುಪ್ಪವನ್ನು ಹಾಕಿ. ದಿನದಲ್ಲಿ ಎರಡು ಬಾರಿ ಟೀ ರೂಪದಲ್ಲಿ ಇದನ್ನು ಸೇವನೆ ಮಾಡಿ. ಇದು ಕೇವಲ ತೂಕ ಕಡಿಮೆ ಮಾಡುವುದೊಂದೇ ಅಲ್ಲ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದ ರಾಷ್ಟ್ರಪತಿ ಡಾ. ಆರಿಫ್ ಅಲ್ವಿ ಅವರ ಹುರುಳಿಲ್ಲದ ಆರೋಪ !

Sat Apr 23 , 2022
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತವು ಮುಸ್ಲಿಮರ ನರಮೇಧ ಮಾಡುತ್ತಿದೆ ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಎಂದು ಪಾಕಿಸ್ತಾನ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರು ಹುರುಳಿಲ್ಲದ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಪ್ರವಾಸದಲ್ಲಿರುವ ಅಮೆರಿಕಾದ ಮಹಿಳಾ ಸಂಸದೆ ಅಲ್ಹಾನ ಉಮರ ಅವರೊಂದಿಗೆ ಮಾತನಾಡುವಾಗ ಅಧ್ಯಕ್ಷ ಅಲ್ವಿ ಈ ಆರೋಪ ಮಾಡಿದ್ದಾರೆ. ‘ಮೋದಿ ಸರಕಾರ ಅಧಿಕಾರದಲ್ಲಿರುವ ಭಾರತದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಶೋಷಣೆಗೆ ಒಳಗಾಗುತ್ತಿದ್ದಾರೆ’, ಎಂದು ಅವರು ಹೇಳಿದರು. ಸಂಪಾದಕೀಯ ನಿಲುವು ಇದನ್ನೇ ಕಳ್ಳನಿಗೊಂದು […]

Advertisement

Wordpress Social Share Plugin powered by Ultimatelysocial