ಪವರ್’ಫುಲ್ ಸಂದೇಶ..!

ಬೆಂಗಳೂರು: ಕೊಟ್ಯಾಂತರ ಜೀವರಾಶಿಗಳಿಗೆ ಇರೋದು ಒಂದೇ ಭೂಮಿ. ಹೀಗಾಗಿ ಈ ಭೂಮಿಯ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಿಶ್ವ ಪರಿಸರ ದಿನಾಚರಣೆ, ವಿಶ್ವ ಆರೋಗ್ಯ ದಿನಾಚರಣೆಯಂತೆಯೇ ಇಂದು ವಿಶ್ವ ಭೂದಿನ. ವಿಶ್ವ ಭೂ ದಿನದಂದು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ  ನಾವು ನಮ್ಮ ಭೂಮಿಯನ್ನು ಸಂರಕ್ಷಿಸೋಣ ಮುಂದೆ ಅದು ನಮ್ಮನ್ನು ರಕ್ಷಿಸುತ್ತದೆ ಅಂತ ಅಭಿಮಾನಿಗಳಿಗೆ ಭೂರಕ್ಷಣೆಗೆ ಕರೆ ನೀಡುವುದರ ಜೊತೆಗೆ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದಾರೆ. ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಅಂತ ಕಿವಿಮಾತು ಹೇಳೋ ಜೊತೆಗೆ ವರನಟ ಡಾ.ರಾಜ್‌ಕುಮಾರ್ ಅವರನ್ನು ಪ್ರಕೃತಿ (ಮರ)ಯಂತೆ ಬಿಂಬಿಸಿ ಡಾ.ಬಿ.ಕೆ.ಎಸ್.ವರ್ಮಾ ಚಿತ್ರಿಸಿರುವ ಚಿತ್ರವನ್ನು ಪುನೀತ್‌ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

427 ಕ್ಕೆ ಏರಿದ ಸೋಂಕಿತರ ಸಂಖ್ಯೆ

Wed Apr 22 , 2020
ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 9 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 427 ಕ್ಕೆ ಏರಿಕೆಯಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಸೋಂಕಿತರ ಪೈಕಿ  ಕಲುಬುರ್ಗಿಯಲ್ಲಿ 5, ಬೆಂಗಳೂರು 2 ಮತ್ತು ಮೈಸೂರನಲ್ಲಿ ಇಬ್ಬರಿಗೆ  ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ […]

Advertisement

Wordpress Social Share Plugin powered by Ultimatelysocial