ಮೇರಿ ಕೋಮ್ ಭಾರತದ ಕ್ರೀಡಾ ಇತಿಹಾಸದಲ್ಲಿನ ಮಹತ್ವಪೂರ್ಣ ತಾರೆ.

 

ಮೇರಿ ಕೋಮ್ ಭಾರತದ ಕ್ರೀಡಾ ಇತಿಹಾಸದಲ್ಲಿನ ಮಹತ್ವಪೂರ್ಣ ತಾರೆ.ಮೇರಿ ಕೋಮ್ 1983ರ ಮಾರ್ಚ್ 1ರಂದು ಜನಿಸಿದರು. ಅವರ ಹೆಸರು ಮಂಗ್ಟೆ ಚುಂಗ್ನೇಜಾಂಗ್ ಮೇರಿ ಕೋಮ್. ಇಂದು ಅವರು ತಮ್ಮ ಸಾಧನೆಗಳಿಂದ ಮೆಗ್ನಿಫಿಷಿಯಂಟ್ ಮೇರಿ ಎನಿಸಿದ್ದಾರೆ. ಮಣಿಪುರದ ಚುರಾಚನಪುರದ ಕಂಗಾಥೈ ಎಂಬ ಗ್ರಾಮದಲ್ಲ್ಲಿ ಬುಡಕಟ್ಟು ಜನಾಂಗದ ಕುಟುಂಬದಿಂದ ಬಂದವರು ಈ ಮೇರಿ ಕೋಮ್. ತಂದೆ ತಾಯಿಯರು ಜೂಮ್ ತೋಟಗಳಲ್ಲಿನ ಕಾರ್ಮಿಕರು.ಮೊಯಿರಾಂಗ್ ಗ್ರಾಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣಗಳನ್ನು ನಡೆಸಿದ ಮೇರಿ ಮುಂದೆ ಇಂಫಾಲದಲ್ಲಿ ಹೈಸ್ಕೂಲು ವ್ಯಾಸಂಗಕ್ಕೆ ಸೇರಿದರು. ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗದ ಕಾರಣ ಪುನಃ ಶಾಲೆಗೆ ಹೋಗಲಿಚ್ಚಿಸದ ಅವರು ಪ್ರತ್ಯೇಕವಾಗಿ ಓದಿ, ಮುಂದೆ ಚುರಾಚಾಂದ್ಪುರದ ಕಾಲೇಜಿನಲ್ಲಿ ಪಧವೀಧರೆಯೂ ಆದರು.ಶಾಲಾ ದಿನಗಳಿಂದಲೂ ಅಥ್ಲೆಟಿಕ್ಸ್ ಕ್ರೀಡೆಗಳತ್ತ ಮೇರಿ ಕೋಮ್ ಆಕರ್ಷಿತರಾಗಿದ್ದರು. ಆದರೆ 2000ದ ವರ್ಷದಲ್ಲಿ ಡಿಂಗ್ಕೋ ಸಿಂಗ್ ಅವರು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೆದ್ದಾಗ ಆ ಕ್ರೀಡೆಯತ್ತ ಒಲವು ಮೂಡಿಸಿಕೊಂಡರು. ಹಾಗಾಗಿ ಮಣಿಪುರ ರಾಜ್ಯದ ಬಾಕ್ಸಿಂಗ್ ಕೋಚ್ ಆದ ಎಂ ನರಜಿತ್ ಸಿಂಗ್ ಅವರಿಂದ ನೇರ ತರಬೇತಿ ಪಡೆದರು.
ಮುಂದೆ ನಡೆದದ್ದು ಇತಿಹಾಸ ಅವರು ಆರು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಎನಿಸಿದ ವಿಶ್ವದಾಖಲೆ ಹಾಗೂ ಭಾಗವಹಿಸಿದ ಏಳೂ ವಿಶ್ವ ಚಾಂಪಿಯನ್ ಸ್ಪರ್ಧೆಗಳಲ್ಲೂ ಪದಕ ಗೆದ್ದ ವಿಶ್ವದ ಏಕೈಕ ಮಹಿಳೆ ಎಂಬ ಕೀರ್ತಿ ಅವರದ್ದು. 2012ರ ಒಲಿಂಪಿಕ್ಸ್ ಸ್ಪರ್ಧೆಗಳಿಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಭಾರತದಿಂದ ಅರ್ಹತೆ ಲಭಿಸಿದ್ದು ಅವರೊಬ್ಬರಿಗೆ ಮಾತ್ರ. 51 ಕೆ ಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾಗವಹಿಸಿದ ಅವರು ದೇಶಕ್ಕೆ ಕಂಚಿನ ಪದಕ ಗಳಿಸಿ ಕೀರ್ತಿ ತಂದರು. 2014 ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಗೆಲುವು, 2018 ಕಾಮನ್ ವೆಲ್ತ್ ಚಿನ್ನದ ಪದಕ ಗೆದ್ದ ಸಾಧನೆವರೆವಿಗೆ ಅವರ ಸಾಧನೆ ನಿರಂತರವಾಗಿ ಮುಂದುವರೆಯುತ್ತಾ ಸಾಗಿತು.ಇದು ಒಬ್ಬ ವ್ಯಕ್ತಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಆ ಆಸಕ್ತಿಯಿಂದ ಅವರಿಗೆ ಪದಕ ಗೆಲ್ಲಲು ಸಾಧ್ಯವಾಯಿತು ಎಂಬ ಸಾಧಾರಣ ವ್ಯಾಖ್ಯಾನದಲ್ಲಿ ನಿರೂಪಿತವಾಗುವಂತಹ ವಿಷಯವಲ್ಲ. ಮೇರಿ ಕೋಮ್ ಅವರು ಈ ಸಾಧನೆಗಳನ್ನು ಮಾಡಲು ತಮಗಿದ್ದ ವ್ಯವಸ್ಥಾತ್ಮಕ ತೊಂದರೆಗಳ ಜೊತೆಗೆ, ಪ್ರತೀಕೂಲವಾಗಿದ್ದ ಭಾವನಾತ್ಮಕ ಕೋಟೆ ಕೊತ್ತಲಗಳನ್ನು ಸಹಾ ದಾಟಬೇಕಾದ ಅನಿವಾರ್ಯತೆ ಇತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
“ನಾನು ಮದುವೆ ಆಗುವ ಸಂದರ್ಭದಲ್ಲಿ ಬಾಕ್ಸಿಂಗ್‌ಗೆ ವಿದಾಯ ಹೇಳಬೇಕೆಂಬ ಒತ್ತಡ ನನ್ನ ಕುಟುಂಬದಿಂದಲೇ ಬಂದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರ- ರಾಜ್ಯಪಾಲರ ಸಭೆ ಬಳಿಕ ಬಂಗಾಳದ ಆರು ಕುಲಪತಿಗಳ ರಾಜೀನಾಮೆ,

Wed Mar 1 , 2023
ಕೊಲ್ಕತ್ತಾ: ಬಂಗಾಳದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಆರು ಮಂದಿ ಕುಲಪತಿಗಳು ಮಂಗಳವಾರ ರಾಜ್ಯಪಾಲ ಸಿ.ವಿ.ಆನಂದ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜಭವನದಲ್ಲಿ ಎರಡು ಗಂಟೆಗಳ ಸುಧೀರ್ಘ ಸಭೆ ನಡೆಸಿದ ರಾಜ್ಯ ಶಿಕ್ಷಣ ಸಚಿವ ಬೃತ್ಯ ಬಸು ಅವರ ಸಮ್ಮುಖದಲ್ಲಿ ಕುಲಪತಿಗಳು ಪದತ್ಯಾಗ ಮಾಡಿದರು. “ಆರು ಮಂದಿ ಕುಲಪತಿಗಳು ತಮ್ಮ ರಾಜೀನಾಮೆ ಪತ್ರಗಳನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಮತ್ತೆ ಕೆಲವರು ನಾಳೆ ರಾಜೀನಾಮೆ ನೀಡಲಿದ್ದಾರೆ. ಉಳಿದವರು ಹಂತ ಹಂತವಾಗಿ ಈ ಕ್ರಮ […]

Advertisement

Wordpress Social Share Plugin powered by Ultimatelysocial