ಹೆಣ್ಣಾಗಿ ಹುಟ್ಟಿದಾಕೆ 47ನೇ ಹುಟ್ಟುಹಬ್ಬವನ್ನು ಗಂಡಾಗಿ ಆಚರಿಸಿಕೊಂಡಳು! ಮಹಿಳೆ ಬಾಳಲ್ಲಿ ಹೀಗೊಂದು ವಿಚಿತ್ರ.

ಇಂದೋರ್ (ಮಧ್ಯಪ್ರದೇಶ): ಹೆಣ್ಣಾಗಿ ಹುಟ್ಟುವುದೇ ಶಾಪ ಎಂದುಕೊಳ್ಳುತ್ತಿರುವವರು ಅದೆಷ್ಟೋ ಮಂದಿ. ಸಮಾಜ, ಸಂಸಾರ, ಸುತ್ತಲಿನ ಪ್ರದೇಶ ಎಲ್ಲೆಡೆಯಿಂದಲೂ ಹಿಂಸೆ ಅನುಭವಿಸಿ, ಹೆಣ್ತನ ಎಂಬುದೇ ತನ್ನ ಬದುಕಿಗೆ ಬಹುದೊಡ್ಡ ಶಾಪವಾಗಿದೆ ಎಂದುಕೊಳ್ಳುತ್ತಿರುವವರ ಪೈಕಿ ಮಧ್ಯಪ್ರದೇಶದ ಇಂದೋರ್​ನ ಮಹಿಳೆಯೂ ಒಬ್ಬರು.

ಜೀವನದುದ್ದಕ್ಕೂ ನರಕಯಾತನೆ ಕಂಡು ಹೆಣ್ಣಾಗಿರುವುದೇ ಬೇಡ ಎಂದುಕೊಂಡ ಸೋನಿ ಅಲ್ಕಾ ಎಂಬ ಮಹಿಳೆ ಈಗ ಲಿಂಗಪರಿವರ್ತನೆ ಮಾಡಿಕೊಂಡು ಗಂಡಾಗಿ ಬದಲಾಗಿದ್ದಾರೆ. ಈ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ.

47 ವರ್ಷದ ಅಲ್ಕಾ ಸೋನಿ ಈಗ ಅಸ್ತಿತ್ವ್​​ ಸೋನಿಯಾಗಿದ್ದಾರೆ. ಹುಟ್ಟುವುದು ನಮ್ಮ ಕೈಯಲ್ಲಿಲ್ಲ. ಹೆಣ್ಣಾಗಿ ಹುಟ್ಟಿದೆ. ಆದರೆ 20ನೇ ವಯಸ್ಸಿನವರೆಗೂ ಹೆಣ್ಣಾಗಿ ತುಂಬಾ ಹಿಂಸೆ ಅನುಭವಿಸಿದೆ. ಗಂಡಾಗಿ ಹುಟ್ಟಬೇಕಿತ್ತು ಎಂಬ ಅದಮ್ಯ ಬಯಕೆ ಉಂಟಾಗತೊಡಗಿತು. ಹೆಣ್ಣಾಗಿದ್ದುಕೊಂಡು ಗಂಡು ಅನುಭವಿಸುವ ಸುಖಗಳನ್ನು ಅನುಭವಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೂ ಗಂಡಿನಂತೆ ಬಟ್ಟೆ ಹಾಕಿಕೊಳ್ಳುತ್ತಿದ್ದೆ. ನನ್ನ ಮನಸ್ಸಿನ ಮೇಲೆ ಗಂಡಸ್ತನ ಎನ್ನುವುದು ಎಷ್ಟು ಪರಿಣಾಮ ಬೀರಿತ್ತು ಎಂದರೆ ನಾನು ಗಂಡಿನಂತೆಯೇ ವರ್ತಿಸಲು ಶುರು ಮಾಡಿದೆ ಎಂದಿದ್ದಾರೆ ಅಲ್ಕಾ.

ಇದೇ ಕಾರಣಕ್ಕೆ ಹೆಣ್ಣಾಗಿ ಇರುವುದು ಇನ್ನು ಉಚಿತವಲ್ಲ ಎಂದುಕೊಂಡು ಈ ಬಗ್ಗೆ ನನ್ನ ಪಾಲಕರ ಮನವೊಲಿಸಿ ಶಸ್ತ್ರಚಿಕಿತ್ಸೆಗೆ ಮುಂದಾದೆ ಎಂದಿರುವ ಅಲ್ಕಾ, ಮುಂಬೈನ ಆಸ್ಪತ್ರೆಯೊಂದರಲ್ಲಿ ಅತ್ಯಂತ ಸಂಕೀರ್ಣವಾದ ಲಿಂಗಪರಿವರ್ತನಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಗಂಡಾಗಿ ಬದಲಾಗಿದ್ದಾರೆ.

‘ತಾನು ಜಗತ್ತಿಗೆ ಹೇಗೆ ಬಂದಿದ್ದೇನೆ ಎಂಬುದು ತನ್ನ ನಿಯಂತ್ರಣದಲ್ಲಿಲ್ಲ. ಆದರೆ ಹೇಗೆ ಜಗತ್ತಿನಿಂದ ಹೊರನಡೆಯಬೇಕು ಎಂಬುದನ್ನು ನಾನೇ ನಿರ್ಧರಿಸಬೇಕು’ ಎಂದು ಅರಿತುಕೊಂಡು ಲಿಂಗ ಬದಲಾವಣೆ ಮಾಡಿಕೊಂಡೆ ಎಂದಿದ್ದಾರೆ.

ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅಲ್ಕಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ, ಶಸ್ತ್ರಚಿಕಿತ್ಸೆಗೆ ಮನೋವೈದ್ಯರ ಅನುಮತಿ ಸೇರಿದಂತೆ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸಿದ್ದರು.ನಂತರ ಅವರ ಫೈಲ್​ ಅನ್ನು ಇಂದೋರ್ ಜಿಲ್ಲಾಡಳಿತಕ್ಕೆ ಕಳುಹಿಸಲಾಯಿತು. ಜಿಲ್ಲಾಡಳಿತ ಆನ್‌ಲೈನ್ ಮೂಲಕ ಅನುಮತಿ ನೀಡಿದ ನಂತರ, 14ರ ತಮ್ಮ ಜನ್ಮದಿನದಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ಗಂಡಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರಿಸರದ ಸುಸ್ಥಿರತೆಯು ದೀರ್ಘಾವಧಿಯಲ್ಲಿ ವ್ಯವಹಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Fri Mar 18 , 2022
ಯುಎನ್ ವರ್ಲ್ಡ್ ಕಮಿಷನ್ ಆನ್ ಎನ್ವಿರಾನ್‌ಮೆಂಟ್ ಅಂಡ್ ಡೆವಲಪ್‌ಮೆಂಟ್ ಸುಸ್ಥಿರತೆಯನ್ನು “ಭವಿಷ್ಯದ ಪೀಳಿಗೆಗಳು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ರಾಜಿ ಮಾಡಿಕೊಳ್ಳದೆ ಪ್ರಸ್ತುತದ ಅಗತ್ಯಗಳನ್ನು ಪೂರೈಸುವುದು” ಎಂದು ವ್ಯಾಖ್ಯಾನಿಸುತ್ತದೆ. ಇದಲ್ಲದೆ, ಪರಿಸರದ ಸಮರ್ಥನೀಯತೆಯು ಭವಿಷ್ಯದ ಪೀಳಿಗೆಗೆ ಪ್ರಸ್ತುತ ಪೀಳಿಗೆಗೆ ಸಮಾನವಾದ, ಉತ್ತಮವಲ್ಲದ ಜೀವನ ವಿಧಾನವನ್ನು ಜೀವಿಸಲು ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಖಾತ್ರಿಪಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಜನಸಂಖ್ಯೆಯಂತೆ ಸತ್ಯವನ್ನು ಒಪ್ಪಿಕೊಳ್ಳುವುದು ಮುಖ್ಯ ಆರ್ಥಿಕ ಚಟುವಟಿಕೆಗಳು ಕ್ಷಿಪ್ರ ಗತಿಯಲ್ಲಿ ವಿಸ್ತರಿಸಿವೆ, ಒಳಹರಿವು ಅಂದರೆ […]

Advertisement

Wordpress Social Share Plugin powered by Ultimatelysocial