ಸನಿಹ ಪೊನ್ನಪ್ಪ ಆದ ನಟಿ ಐಶಾನಿ ಶೆಟ್ಟಿ.

‘ಸನಿಹ ಪಾತ್ರಕ್ಕೆ ಲವ್‌ ಎಪಿಸೋಡ್‌ಗಳಿವೆ ಮತ್ತು ಕೆಲವು ಭಾವನಾತ್ಮಕ ಅಂಶಗಳಿವೆ. ಟೀನೇಜ್‌ನಿಂದ ಮದುವೆಯವರೆಗೆ, ಮದುವೆಯ ನಂತರದ ಜೀವನ ಹೀಗೆ ಹಲವು ಶೇಡ್‌ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಈ ಕಾರಣಕ್ಕಾಗಿ ಮೂರು ರೀತಿಯ ಲುಕ್‌ಗಳು ಚಿತ್ರದಲ್ಲಿವೆ. ಈ ಪೈಕಿ ಕಾಲೇಜು ಹುಡುಗಿಯ ಲುಕ್‌ ನನ್ನ ಫೇವರಿಟ್‌. ಇದರಲ್ಲಿ ಹೇರ್‌ ಕಟ್‌ ಮತ್ತು ಕಾಸ್ಟ್ಯೂಮ್‌ಗಳನ್ನೂ ಅಂದಿನ ಕಾಲಕ್ಕೆ ಮ್ಯಾಚ್‌ ಮಾಡಿದ್ದೇವೆ. ಈ ಪಾತ್ರಕ್ಕಾಗಿ ನಾನು ಕೊಂಚ ಸಣ್ಣ ಮತ್ತು ದಪ್ಪ ಎಲ್ಲವೂ ಆಗಿದ್ದೆ. ನಿರ್ದೇಶಕರು ನನ್ನ ಪಾತ್ರವನ್ನು ಬಹಳ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ’ ಎನ್ನುವುದು ಐಶಾನಿ ಶೆಟ್ಟಿ ಮಾತು.
‘ಈ ಪಾತ್ರವನ್ನು ನಾನು ಒಪ್ಪಿಕೊಳ್ಳಲು ಮುಖ್ಯ ಕಾರಣ ಚಿತ್ರದಲ್ಲಿರುವ ಎಮೋಷನಲ್‌ ಗ್ರಾಫ್‌. ಕಾಲೇಜು ದಿನಗಳ ಹುಡುಗಾಟಿಕೆ, ನಂತರ ಬರುವ ಸೀರಿಯಸ್ನೆಸ್‌, ಮದುವೆಯ ನಂತರದ ಸಮಸ್ಯೆಗಳು ಹೀಗೆ ಎಲ್ಲವನ್ನೂ ಬಹಳ ಚೆಂದವಾಗಿ ವಿವರಿಸಿದ್ದಾರೆ ನಿರ್ದೇಶಕರು. ಈ ರೀತಿಯ ಪಾತ್ರ ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ಹಾಗಾಗಿ ಸನಿಹ ಪಾತ್ರ ಹಲವರಿಗೆ ಕನೆಕ್ಟ್ ಆಗುತ್ತದೆ’ ಎಂದಿದ್ದಾರೆ ಐಶಾನಿ ಶೆಟ್ಟಿ. ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಅವರು ನಟ ಶ್ರೀಮಹಾದೇವ್‌ಗೆ ಜೋಡಿಯಾಗಿ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಧ್ವಂಸ:

Fri Jan 27 , 2023
ಮೆಲ್ಬರ್ನ್‌: ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯುವುದು ಹಾಗೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಕಳೆದ ತಿಂಗಳಿಂದ ಇಲ್ಲಿಯವರೆಗೆ, ಇಲ್ಲಿನ ಸ್ವಾಮಿನಾರಾಯಣ ಹಾಗೂ ಇಸ್ಕಾನ್‌ ದೇವಸ್ಥಾನ, ಕಾರಂ ಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ-ವಿಷ್ಣು ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದು, ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ‘ಭಾರತ ವಿರೋಧಿ ಭಯೋತ್ಪಾದಕರನ್ನು ವೈಭವೀಕರಿಸಿ, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುವುದನ್ನು ನಿರ್ಭೀಡೆಯಿಂದ, ಪದೇ ಪದೇ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ […]

Advertisement

Wordpress Social Share Plugin powered by Ultimatelysocial