ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿತು ಬ್ಲ್ಯಾಕ್ ಬೆಲ್ಟ್ ಪಡೆದ ಯುವತಿಯರು.

ಕಲಘಟಗಿ: ಹೌದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯದ ಹಿನ್ನೆಲೆಯಲ್ಲಿ ಈ ಇಬ್ಬರು ಯುವತಿಯರು ತಮ್ಮ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುತ್ತ ಇಗ ತಾಲೂಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ

ಹೌದು ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ವಿಜಯಲಕ್ಷ್ಮಿ ಹರಮಣ್ಣವರ ಹಾಗೂ ತಾಲೂಕಿನ ಬೇಲವಂತರ ಗ್ರಾಮದ ಪ್ರತಿಭಾ ಹೀರೆಮಠ ಈ ಇಬ್ಬರು ಯುವತಿಯರು ಸುಮಾರು 5 ವರ್ಷಗಳಿಂದ ಕಲಘಟಗಿಯ ಅನ್ನಪೂರ್ಣ ತರಬೇತಿ ಸಂಸ್ಥೆಯಲ್ಲಿ ಕರಾಟೆ ತರಬೇತಿ ಪಡೆಯುತ್ತ ಬಂದಿದ್ದು ತಮ್ಮ ಒಂದು ಶ್ರಮದಿಂದ ಕಳೆದ ರವಿವಾರ ಹುಬ್ಬಳ್ಳಿಯಲ್ಲಿ ನಡೆದ ಅಸ್ಪಾಯರ್ ಕರಾಟೆ ಅಕ್ಯಾಡೆಮಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

ಈ ಇಬ್ಬರು ಯುವತಿಯರು ಕಲಘಟಗಿಯ ದಾಸ್ತಿಕೋಪ್ಪ ಗ್ರಾಮದ ಸರ್ಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಕಲಘಟಗಿ ತಾಲೂಕಿನಲ್ಲಿ ಪ್ರಪ್ರಥಮ ಕರಾಟೆ ಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಯುವತಿಯರು ಎಂಬ ಹೆಗ್ಗಳಿಕೆ ಕೂಡ ಪಾತ್ರರಾಗಿದ್ದಾರೆ ಇವರ ಈ ಒಂದು ಸಾಧನೆಗೆ ತಂದೆ ತಾಯಿಗಳು ಸಂತೋಷ ವೆಕ್ತ ಪಡಿಸಿದ್ದು ಕರಾಟೆ ಶಿಕ್ಷಕರು, ಅನ್ನಪೂರ್ಣ ತರಬೇತಿ ಸಂಸ್ಥೆಯವರು ಹಾಗೂ ತಾಲೂಕಿನ ವಿವಿಧ ಸಂಘಟನೆಗಳು ಯುವತಿಯರಿಗೆ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಸುನೀತಾ ಶೆಟ್ಟಿ

Wed Dec 21 , 2022
ಏಳು ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಸಮೀಪದಲ್ಲೇ ಹಸನ್ಮುಖಿಯೊಬ್ಬರು ಇದ್ದರು. ನಂತರ ಅವರ ಪುಟಾಣಿ ಪ್ರಾಜ್ಞ ಭಾಷಣ ಕೂಡಾ ಇತ್ತು. ಅವರೊಡನೆ ಮಾತನಾಡಬೇಕು ಅನ್ನಿಸಿ, ತಮ್ಮನ್ನು ತುಂಬಾ ನೋಡಿದ್ದೇನೆ ಅನಿಸುತ್ತೆ ಯಾರೂ ಅಂತ ಗೊತ್ತಾಗಲಿಲ್ಲ ಎಂದಾಗ, ಆತ್ಮೀಯವಾಗಿ ನಾನು ಕಿರುತೆರೆಯಲ್ಲಿ ಬಹಳಷ್ಟು ಅಭಿನಯಿಸಿದ್ದೇನೆ ಸಾರ್ ಎಂದು ಅದೇ ಹಸನ್ಮುಖದೊಡನೆ, ಸರಳವಾಗಿ, ಗೌರವಯುತವಾಗಿ ನುಡಿದರು. ಕಿರುತೆರೆಯ ಕಾರ್ಯಕ್ರಮಗಳನ್ನು ಅಷ್ಟೊಂದು ಗಂಭೀರವಾಗಿ ನೋಡದ ನನಗೆ ನಿಧಾನವಾಗಿ ಅರಿವಿಗೆ ಬಂದದ್ದು ಅವರು ಪ್ರಖ್ಯಾತ […]

Advertisement

Wordpress Social Share Plugin powered by Ultimatelysocial