ದಕ್ಷಿಣ ಕೊರಿಯಾದ ಖಾಲಿ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿದೆ. ಈ ವೇಳೆ ಖಾಲಿಯಿದ್ದ ಪ್ರೇಕ್ಷಕರ ಖುರ್ಚಿ ಮೇಲೆ ಕುಳಿತ ಗೊಂಬೆಗಳು ಸುದ್ದಿ ಮಾಡಿವೆ. ಖಾಲಿ ಖುರ್ಚಿ ಮೇಲೆ ಸೆಕ್ಸ್ ಡಾಲ್ ಗಳನ್ನು ಕೂರಿಸಲಾಗಿತ್ತು. ಕೊರೊನಾ ವೈರಸ್‌ನಿಂದಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡುವವರಿಗೆ ನಿಷೇಧ ಹೇರಲಾಗಿದೆ. ಕಳೆದ ಭಾನುವಾರದ ನಡೆದ ಪಂದ್ಯದ ವೇಳೆ ಸೆಕ್ಸ್ ಡಾಲ್ಸ್ ಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಲಾಗಿತ್ತು. ಗೊಂಬೆಗಳಿಗೆ ಟೀ ಶರ್ಟ್ ಹಾಕಿದ್ದರು. ಗೊಂಬೆ ಕೈನಲ್ಲಿದ್ದ ಫಲಕಗಳಲ್ಲಿ ಸೆಕ್ಸ್ ಟಾಯ್ಸ್ ಮಾರಾಟಗಾರರ ಲೋಗೊ ಇತ್ತು. ಈ ಘಟನೆಯ ನಂತರ ಅಧಿಕಾರಿಗಳ ಸಮಿತಿಯು ಕ್ಲಬ್‌ಗೆ ದಾಖಲೆಯ ದಂಡ ವಿಧಿಸಿದೆ. ಕ್ಲಬ್ ಗೆ 62 ಲಕ್ಷ 17 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಫುಟ್ಬಾಲ್ ಕ್ಲಬ್ ಮಹಿಳಾ ಅಭಿಮಾನಿಗಳನ್ನು ಅವಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಪುಟ್ಬಾಲ್ ನೋಡಲು ಬಂದಿದ್ದ ಸೆಕ್ಸ್ ಡಾಲ್

Please follow and like us: