ಹೊಸ ಸೀರಿಯಲ್ನಲ್ಲಿ ಅನಿರುಧ್ ನಟನೆ – ಆರೂರು ಜಗದೀಶ್ ಏನಂದ್ರು?

ನಟ ಅನಿರುಧ್ ಅವರನ್ನ 2 ವರ್ಷಗಳ ಕಾಲ ಕಿರುತೆರೆಯಿಂದ ದೂರವಿಡಬೇಕು ಎಂದು ನಿರ್ಧರಿಸಿ, ನಿರ್ಮಾಪಕರ ತಂಡ ಅವರನ್ನ ಬ್ಯಾನ್ ಮಾಡಿತ್ತು. ಇದಕ್ಕೆ ಅನಿರುಧ್ ಅಭಿಮಾನಿಗಳು ಸಿಟ್ಟಾಗಿದ್ದರು. ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ ಹಾಗೂ ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಗರಂ ಆಗಿದ್ದರು. ಇದಕ್ಕೆ ಬಲವಾದ ಕಾರಣಗಳನ್ನ ಪ್ರೆಸ್ ಮೀಟ್ ಮಾಡುವ ಮೂಲಕ ನಿರ್ಮಾಪಕರ ತಂಡ ವೀಕ್ಷಕರಿಗೆ ನೀಡಿತ್ತು. ಆದರೂ ಅನಿರುಧ್ ಅಭಿಮಾನಿಗಳ ಬೇಸರ ಕಡಿಮೆ ಆಗಿರಲಿಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಆರೂರು ಜಗದೀಶ್ ವಿರುದ್ಧ ಕಮೆಂಟ್ಗಳನ್ನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಜೊತೆಗೆ ಅನಿರುಧ್ ಅವರಿಗೆ ಮತ್ತೊಮ್ಮೆ ತೆರೆಮೇಲೆ ಬನ್ನಿ ನಿರ್ಮಾಪಕರಿಗೆ ನೀವು ಬೇಡವಾಗಿರಬಹುದು ಆದರೆ ನಮಗೆ ನೀವು ಬೇಕು ನೀವು ಸಿನಿಮಾ ಸೀರಿಯಲ್ ಮಾಡಿ ಎಂದು ಕೇಳಿಕೊಂಡಿದ್ದರು. ಇದೀಗ ಅಭಿಮಾನಿಗಳ ಆಸೆ ಈಡೇರುವಂತಹ ಸಂದರ್ಭ ಬಂದಿದೆ. ಮತ್ತೊಮ್ಮೆ ಕಿರುತೆರೆ ಮೇಲೆ ಬರೋದಕ್ಕೆ ಅನಿರುಧ್ ರೆಡಿಯಾಗಿದ್ದಾರೆ.

ಹೌದು ಕಲಾಸಾಮ್ರಾಟ್ ಎಸ್. ನಾರಾಯಣ್ ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿರುವ “ಸೂರ್ಯವಂಶ” ಎನ್ನುವ ಧಾರಾವಾಹಿಯ ಮೂಲಕ ಮತ್ತೊಮ್ಮೆ ಬಣ್ಣಹಚ್ಚಲಿದ್ದಾರೆ ಅನಿರುಧ್.

ಇನ್ನು ಈ ಬಗ್ಗೆ ಆರೂರು ಜಗದೀಶ್ ಪ್ರತಿಕ್ರಿಯೆ ನೀಡಿದ್ದು, “ಅನಿರುದ್ಧ್ ಅವರನ್ನು ಕಿರುತೆರೆಯಿಂದ 2 ವರ್ಷ ದೂರ ಇಡಬೇಕು ಎಂದು ನಾನು ತೀರ್ಮಾನ ಕೈಗೊಂಡಿದ್ದಲ್ಲ. ನಿರ್ಮಾಕರ ಸಂಘ ಕೈಗೊಂಡ ನಿರ್ಧಾರ. ಸದ್ಯ ನಾನು ನನ್ನ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿ ಇದ್ದೀನಿ. ಈ ಬಗ್ಗೆ ನಿರ್ಮಾಪಕರ ಸಂಘದವರು ಮಾತನಾಡಬೇಕು” ಎಂದು ಹೇಳಿದರು.

ಒಟ್ನಲ್ಲಿ ಅನಿರುಧ್ ಮತ್ತೆ ಆಕ್ಟ್ ಮಾಡ್ತಾರೆ ಅನ್ನೋ ಸುದ್ದು ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದ್ದು, ಜೊತೆಜೊತೆಯಲಿ ಸೀರಿಯಲ್ನಲ್ಲಿ ಆರ್ಯವರ್ಧನ್ ಪಾತ್ರದಷ್ಟೇ ಈ ಧಾರಾವಾಹಿಯ ಪಾತ್ರವೂ ಪ್ರೇಕ್ಷಕರ ಮನ ಮುಟ್ಟುತ್ತಾ ? ಅನ್ನೋದನ್ನ ಕಾದು ನೋಡಬೇಕು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:
Please follow and like us:

Leave a Reply

Your email address will not be published. Required fields are marked *

Next Post

ವಿವಾಹ ವಾರ್ಷಿಕೋತ್ಸವ, ಭಾವುಕ ಪೋಸ್ಟ್ ಹಂಚಿಕೊಂಡ ಸುಮಲತಾ.

Thu Dec 8 , 2022
ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಹಾಗೂ ನಟಿ ಸುಮಲತಾ ಅಂಬರೀಶ್ (Sumalatha Ambareesh) ಅವರ ವಿವಾಹದ ದಿನ (Wedding Anniversary) ಇಂದು. ಸ್ಯಾಂಡಲ್​​ವುಡ್​ನಲ್ಲಿ (Sandalwood) ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಂತಹ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. 1991ರಲ್ಲಿ ಡಿಸೆಂಬರ್ 8ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಸ್ಯಾಂಡಲ್​ವುಡ್ ಜೋಡಿಗೆ ಒಬ್ಬ ಮಗನಿದ್ದಾನೆ. ಇದೀಗ ಅಂಬರೀಶ್ ಅವರು ಜೊತೆಗಿರದಿದ್ದರೂ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು ಪತಿಗಾಗಿ ಭಾವುಕ ಬರಹವೊಂದನ್ನು ಸೋಷಿಯಲ್ […]

Advertisement

Wordpress Social Share Plugin powered by Ultimatelysocial