ಮುಂದಿನ 48 ಗಂಟೆಗಳ ಒಳಗೆ ಅಲ್ಲಿರುವ ಅಮೆರಿಕನ್ನರು ದೇಶ ತೊರೆಯಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

 

ವಾಷಿಂಗ್ಟನ್  .ಫೆ,12- ಊಕ್ರೇನ್ ಮೇಲೆ ರಷ್ಯಾ ಆಕ್ರಮಣವು ಕೆಲವೇ ದಿನಗಳಲ್ಲಿ ಪ್ರಾರಂಭವಾಗಬಹುದು ಮುಂದಿನ 48 ಗಂಟೆಗಳ ಒಳಗೆ ಅಲ್ಲಿರುವ ಅಮೆರಿಕನ್ನರು ದೇಶ ತೊರೆಯಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.ಪ್ರಸ್ತುತ ಉಕ್ರೇನ್ ಪಕ್ಕದಲ್ಲಿ 1ಲಕ್ಷಕ್ಕೂ ಹೆಚ್ಚು ರಷ್ಯಾದ ಪಡೆಗಗ ದಾಳಿಗೆ ಸಜ್ಜಾಗಿದೆ ಆದರಿಂದ ಕೂಡಲೆ ಅಲ್ಲಿಂದ ನಿರ್ಗಮಿಸಿ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.ಚೀನಾದಲ್ಲಿ ಬೀಜಿಂಗ್ ಒಲಿಂಪಿಕ್ಸï ಮುಗಿಯುವ ಮೊದಲು ಅಂತಹ ದಾಳಿಯು ಸಂಭವಿಸಬಹುದು ಎಂದು ಹೇಳಿರುವು ಅಚ್ಚರಿ ಮೂಡಿಸಿದೆ. ರಷ್ಯಅಧ್ಯಕ್ಷ ವ್ಲಾಡಿರ್ಮಿ ಪುಟಿನ್ ಅವರು ನಿಖರವಾದ ನಿರ್ಣಯವನ್ನು ಊಹಿಸಲು ಸಾಧ್ಯವಿಲ್ಲ ಯುದ್ದ ವೈಮಾನಿಕ ಬಾಂಬ್ ದಾಳಿ ಮತ್ತು ಕ್ಷಿಪಣಿ ದಾಳಿಯೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದೆ, ಅದು ನಾಗರಿಕರನ್ನು ಕೊಲ್ಲುತ್ತದೆ ಎಂದು ಅವರು ಹೇಳಿದರು.ಉಕ್ರೇನ್‍ನಲ್ಲಿರುವ ಅಮೇರಿಕನ್ ಪ್ರಜೆ ಆದಷ್ಟು ಬೇಗ ಹೊರಡಬೇಕು ಎಂದು ಸೂಚಿಸಿದ್ದಾರೆ ಇಮದು ಬಿಡೆನ್ ಅವರು ಪುಟಿನ್ ಅವರೊಂದಿಗೆ ಮಾತನಾಡಲಿದ್ದಾರೆ ಅಕಾರಿಯೊಬ್ಬರು ತಿಳಿಸಿದ್ದಾರೆ ಇದು ಭಾರಿ ಕುತೂಹಲ ಕೆರಳಿಸಿದೆ.ಇದರ ನಡುವೆ ಸುಲ್ಲಿವಾನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಮ್ಮು ಮತ್ತು ಕಾಶ್ಮೀರ: ಸೋಪೋರ್‌ನಲ್ಲಿ ಮೂವರು ಅಲ್-ಬದರ್ ಭಯೋತ್ಪಾದಕರನ್ನು ಬಂಧಿಸಲಾಗಿದೆ

Sat Feb 12 , 2022
  ಜಮ್ಮು ಮತ್ತು ಕಾಶ್ಮೀರ: ಸೋಪೋರ್‌ನಲ್ಲಿ ಮೂವರು ಅಲ್-ಬದರ್ ಭಯೋತ್ಪಾದಕರನ್ನು ಬಂಧಿಸಲಾಗಿದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಸೋಪೋರ್ ಜಿಲ್ಲೆಯ ಡಾಂಗಿವಾಚಾ ಪ್ರದೇಶದಲ್ಲಿ ಮೂವರು ಸಕ್ರಿಯ ಅಲ್-ಬದ್ರ್ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಾಂಗಿವಾಚಿ ಗ್ರಾಮದಲ್ಲಿ ಸ್ಥಳೀಯ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ಪಕ್ಷವು ಮೂವರು ಭಯೋತ್ಪಾದಕರನ್ನು ಬಂಧಿಸಿದೆ. ಅವರ ಮೆರವಣಿಗೆಯಿಂದ ಪೊಲೀಸರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕಾನೂನಿನ […]

Advertisement

Wordpress Social Share Plugin powered by Ultimatelysocial