ವಿಚಿತ್ರ ಕಾಯಿಲೆಗೆ ಉಚಿತ ಚಿಕಿತ್ಸೆ ಕೊಟ್ಟ ರಿಮ್ಸ್ ಆಸ್ಪತ್ರೆ

ವಿಚಿತ್ರ ಕಾಯಿಲೆಗೆ ಉಚಿತ ಚಿಕಿತ್ಸೆ ಕೊಟ್ಟ ರಿಮ್ಸ್ ಆಸ್ಪತ್ರೆ

ಮಕ್ಕಳನ್ನೆ ಟಾರ್ಗೆಟ್ ಮಾಡುವ ಆ ಖಾಯಿಲೆ ಡಿಸ್‌ಎಮಿನೆಟೆಡ್ ಸ್ಟಾಫಿಲೋಕಾಕಲ್ ಸೆಪ್ಸಿಸ್. ಇಂತಹ ಭಯಾನಕ ಖಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ರಾಯಚೂರು ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿ, ಬಾಲಕನ ಪ್ರಾಣ ಉಳಿಸಿದ್ದಾರೆ.

ಮಕ್ಕಳನ್ನೆ ಟಾರ್ಗೆಟ್ ಮಾಡುವ ಆ ಖಾಯಿಲೆ ಡಿಸ್‌ಎಮಿನೆಟೆಡ್ ಸ್ಟಾಫಿಲೋಕಾಕಲ್ ಸೆಪ್ಸಿಸ್.

ಇಂತಹ ಭಯಾನಕ ಖಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ರಾಯಚೂರು ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿ, ಬಾಲಕನ ಪ್ರಾಣ ಉಳಿಸಿದ್ದಾರೆ. ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ ರಾಮು ಅನ್ನೊ ಬಾಲಕ ಶಾಲೆಗೆ ಹೋದಾಗ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದ. ಬಳಿಕ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಆಗ ಬಾಲಕ ರಾಮು ತಂದೆ ಹೆಚ್ಚಿನ ಹಣವಿಲ್ಲದೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. ಆಗ ಮಕ್ಕಳ ತಜ್ಞರು ಭಯಾನಕ ಖಾಯಿಲೆಯನ್ನು ಪತ್ತೆ ಹಚ್ಚಿ, ಒಟ್ಟು 19 ದಿನಗಳ ಕಾಲ ಬಾಲಕನನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಟ್ಟಿದ್ರು. ಆಗ ವೈದ್ಯರು ಹೃದಯ, ಪಕ್ಕೆಲುಬು ಹಾಗೂ ಕೀಲುಗಳಲ್ಲಿನ ಕೀವು ಹೊರ ತೆಗೆದು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ. ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 8-10 ಲಕ್ಷ ಖರ್ಚಾಗತ್ತೆ ಆದ್ರೆ ರಿಮ್ಸ್ ಆಸ್ಪತ್ರೆ ಬಾಲಕ ರಾಮುನಿಗೆ ಉಚಿತ ಚಿಕಿತ್ಸೆ ನೀಡಿ ಜೀವ ಉಳಿಸಿದೆ. ರಿಮ್ಸ್ ಆಸ್ಪತ್ರೆ ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಅಭಿನಂದನೆಯ ಮಹಾಪುರವೆ ಹರಿದು ಬರ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

2020-21ನೇ ಸಾಲಿನಲ್ಲಿ 83,000 ಬ್ಯಾಂಕ್ ವಂಚನೆ ಪ್ರಕರಣ

Fri Dec 17 , 2021
ದೇಶದಲ್ಲಿ ಬ್ಯಾಂಕ್ ಗಳಿಗೆ ವಂಚಿಸುವ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಿದ್ದು, ಇದನ್ನು ತಡೆಯಲು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಾಜಾ ಉದಾಹರಣೆ 2021ನೇ ಸಾಲಿನಲ್ಲಿ ದೇಶದಲ್ಲಿ 83 ಸಾವಿರ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿರುವುದು! ಹೌದು, ಆರ್ ಟಿಐನಲ್ಲಿ ಕೇಳಲಾದ ಪ್ರಶ್ನೆಗೆ ಆರ್ ಬಿಐ ನೀಡಿದ ಉತ್ತರದಲ್ಲಿ ಈ ಆಘಾತಕಾರಿ ವಿಷಯ ಬಹಿರಂಗಗೊಂಡಿದ್ದು, ದೇಶದಲ್ಲಿ ಪ್ರತಿನಿತ್ಯ ಸರಾಸರಿ 229 ಬ್ಯಾಂಕ್ ವಂಚನೆ ಪ್ರಕರಣಗಳು ನಡೆಯುತ್ತಿವೆ. 2021ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟಾರೆ […]

Advertisement

Wordpress Social Share Plugin powered by Ultimatelysocial