ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸೋಂಕುಕಾರಕ ಓಮೈಕ್ರಾನ್

ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸೋಂಕುಕಾರಕ ಓಮೈಕ್ರಾನ್: ಅಧ್ಯಯನ

ಬೀಜಿಂಗ್; ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್, ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ, ಆದರೆ, ರೋಗದ ತೀವ್ರತೆ ಅತ್ಯಂತ ಕಡಿಮೆ ಇದ್ದಂತೆ ತೋರುತ್ತಿದೆ ಎಂದು ಹಾಂಗ್‌ಕಾಂಗ್‌ನ ಹೊಸ ಅಧ್ಯಯನವೊಂದು ಹೇಳಿದೆ.ಡೆಲ್ಟಾ ರೂಪಾಂತರ ತಳಿ ಮತ್ತು ಮೂಲ ವೈರಸ್ ಸಾರ್ಸ್-ಕೋವ್-2ಗೆ ಹೋಲಿಸಿದರೆ ಓಮೈಕ್ರಾನ್ ತಳಿಯು ಮಾನವನ ಶ್ವಾಸನಾಳಕ್ಕೆ 70 ಪಟ್ಟು ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹಾಂಗ್‌ಕಾಂಗ್ ಸಂಶೋಧಕರ ತಂಡ ಹೇಳಿದೆ.

ಸೋಂಕಿತರಲ್ಲಿ ಗಂಭೀರ ಪರಿಣಾಮ ಉಂಟು ಮಾಡುತ್ತಿದ್ದ ಮೂಲ ವೈರಸ್‌ಗೆ ಹೋಲಿಸಿದರೆ ಓಮೈಕ್ರಾನ್‌ನಿಂದ ರೋಗದ ತೀವ್ರತೆ ಅತ್ಯಂತ ಕಡಿಮೆ ಇರುತ್ತದೆ ಎನ್ನುತ್ತಿದೆ ಅಧ್ಯಯನ.

ಸಾರ್ಸ್‌-ಕೋವ್-2ನ ಇತರೆ ರೂಪಾಂತರಗಳಿಗಿಂತ ಓಮೈಕ್ರಾನ್ ಹರಡುವಿಕೆ ಮತ್ತು ರೋಗದ ತೀವ್ರತೆಯಲ್ಲಿ ಏಕೆ ಭಿನ್ನವಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಉಸಿರಾಟದ ಪ್ರದೇಶದ ಎಕ್ಸ್‌ ವಿವೊ ಕಲ್ಚರ್‌ಗಳನ್ನು ಬಳಸಿದ್ದಾರೆ.

ಈ ವಿಧಾನದಲ್ಲಿ ಉಸಿರಾಟದ ಪ್ರದೇಶದ ವೈರಲ್ ರೋಗಗಳನ್ನು ಪತ್ತೆ ಮಾಡಲು ಶ್ವಾಸಕೋಶದ ಅಂಗಾಂಶವನ್ನು ಬಳಸಲಾಗುತ್ತದೆ.

ಈ ವಿಧಾನದ ಮೂಲಕ ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಮೈಕಲ್ ಚಾನ್ ಚಿ ವಾಯ್ ಅವರ ತಂಡವು, ಓಮೈಕ್ರಾನ್ ತಳಿಯನ್ನು ಪ್ರತ್ಯೇಕಗೊಳಿಸಿ ಸಾರ್ಸ್-ಕೋವ್-2 ಲಕ್ಷಣಗಳ ಜೊತೆಗೆ ತುಲನಾತ್ಮಕ ಅಧ್ಯಯನ ಮಾಡಿದ್ದಾರೆ.

ಓಮೈಕ್ರಾನ್ ತಳಿಯು ಕೊರೊನಾ ಮೂಲ ತಳಿ ಮತ್ತು ಟೆಲ್ಟಾಗಿಂತಲೂ ಬಹು ಬೇಗ ಮಾನವನ ಶ್ವಾಸನಾಳದಲ್ಲಿ ರೂಪುಗೊಳ್ಳುವುದನ್ನು ತಂಡ ಪತ್ತೆಮಾಡಿದೆ.

Please follow and like us:

Leave a Reply

Your email address will not be published. Required fields are marked *

Next Post

Just how Many Years In case you have in a Serious Relationship Before You Get Married?

Fri Dec 17 , 2021
You may be curious about how time should you have in a serious relationship before you get married. The answer relies upon largely on your preferences and who you will be marrying. A large number of people enter relationships looking to meet the correct person and it may take years […]

Advertisement

Wordpress Social Share Plugin powered by Ultimatelysocial