ಪುರೋಹಿತೆಯಾದ ಪೋಲಿಸ್ ಅಧಿಕಾರಿ

ಮಧ್ಯಪ್ರದೇಶ:ಮದುವೆ ಮಾಡಿಸಲು ಲಾಕ್‌ಡೌನ್ ಕಾರಣದಿಂದ ಪುರೋಹಿತರು ಸಿಕ್ಕಿಲ್ಲ ಎಂದು ಪೋಲಿಸ್ ಅಧಿಕಾರಿಯೇ ಪೌರೋಹಿತ್ಯ ವಹಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯಲ್ಲಿ ನಡೆದಿದೆ. ಲಾಕ್‌ಡೌನ್ ಪಾಲಿಸುವುದಕ್ಕೆ ಪೋಲಿಸ್ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇದೇ ಕಾರಕ್ಕೆ ಮಹಿಳಾ ಪಿಎಸ್‌ಐಗೆ ಪೌರೋಹಿತ್ಯ ವಹಿಸುವು ಅನಿವಾರ್ಯವಾಗಿತ್ತು. ಈಲ್ಲೆಯ ಶ್ರೀನಗರದ ಲಕ್ಮಣ್ ಚೌಧರಿ ಹಾಗೂ ಇತ್ವಾರಾ ಬಜಾರ್‌ನ ರುತು ಚೌಧರಿಗೆ ವಿವಾಹ ನಿಶ್ಚಯವಾಗಿತ್ತು. ಅವರು ಸ್ಥಳೀಯ ಆಡಳಿತದಿಂದ ಜೋಟೇಶ್ವರದ ಪಾರ್ವತಿ ದೇವಸ್ಥಾನದಲ್ಲಿ ಮದುವೆಗೆ ಅನುಮತಿ ಪಡೆದಿದ್ದರು. ಆದ್ರೆ ಕರೆಕ್ಟ್ ಆಗಿ ಮದುವೆ ದಿನ ಪುರೋಹಿತರೇ ಸಿಗಲಿಲ್ಲ. ಇದೇ ಸಮಯಕ್ಕೆ ಸರಿಯಾಗಿ ದೇವಸ್ಥಾನದ ಬಳಿ ಗಸ್ತು ತಿರುಗುತ್ತಿದ್ದ ಜೋಟೇಶ್ವರ ಠಾಣೆಯ ಮಹಿಳಾ ಎಸ್‌ಐ ಅಂಜಲಿ ಅಗ್ನಿಹೋತ್ರಿ ಇವರನ್ನು ನೋಡಿ ದೇವಸ್ಥಾನಕ್ಕೆ ಬಂದಿದ್ದಾರೆ. ಮದುವೆ ಕಾರ್ಯಕ್ಕೆ ಅನುಮತಿ ಪಡೆದಿದ್ದಾರೋ ಇಲ್ಲವೋ ನೋಡಲು ಬಂದಿದ್ದು. ಎರಡು ಕಡೆಯ ಕುಟುಂಬಸ್ಥರು ಅವರಿಗೆ ಪೌರೋಹಿತ್ಯ ವಹಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಎಸ್‌ಐ ಅಂಜಲಿ ಗೂಗಲ್‌ನಲ್ಲಿ ನೋಡಿಕೊಂಡು ಮಂತ್ರೋಚ್ಛಾರಣೆ ಮಾಡಿ ಸಪ್ತಪದಿ ತುಳಿಸಿದ್ದಾರೆ. ಜತೆಗೆ ಕಾನೂನು ಪಾಲನೆ ಬಗ್ಗೆ ಮಾಹಿತಿ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

 ಅಜ್ಜಿ ಬಳಿ ಅಡುಗೆ ಕಲಿಯುತ್ತಿರುವ ನಟ ರಾಮ್ ಚರಣ್…!

Sat May 2 , 2020
ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲಿಯಲೇ ಕಾಲಕಳೆಯುವಂತಾಗಿದೆ. ಸಿನಿ ಸಲೆಬ್ರಿಟಿಗಳು ಸಹ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗುವ ಮೂಲಕ ಅಭಿಮಾನಿಗಳ ಜೊತೆ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ. ಇತ್ತೀಚಿಗೆ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ರಿಯಲ್ ಮ್ಯಾನ್ ಚಾಲೆಂಜ್ ಒಂದಿಷ್ಟು ದಿನ ವೈರಲ್ ಆಗಿತ್ತು. ಟಾಲಿವುಡ್ ಸ್ಟಾರ್ ನಟರು ಮನೆಗೆಲಸ ಮಾಡಿ ಸವಾಲ್ ಸ್ವೀಕರಿಸಿ, ಮತ್ತೊಬ್ಬ ಸ್ಟಾರ್ ಗೆ ಚಾಲೆಂಜ್ […]

Advertisement

Wordpress Social Share Plugin powered by Ultimatelysocial