ಬೆಂಗಳೂರು ನಗರದ ಪೊಲೀಸ ಜೊತೆ ವಾಲಂಟಿಯರ್ಸ ಆಗಿ ಕೆಲಸ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ನಾಗರೀಕರು ಮುಂದೆ ಬಂದಿದ್ದಾರೆ. ಪೂಲೀಸರಿಗೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದು ಸಿಬ್ಬಂದಿ ಕೊರತೆ ಉಂಟಾಗಿದೆ. ಈ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಲಿಕಾನ್ ಸಿಟಿ ನಾಗರಿಕರಿಗೆ ಲಾಕ್ಡೌನ್ ವೇಳೆ ಪೊಲೀಸರ ಜೊತೆ ಕೆಲಸ ಮಾಡಲು ಅವಕಾಶ ನೀಡಿದ್ರು. ಆಸಕ್ತಿ ಉಳ್ಳ ೧೮ ರಿಂದ ೪೫ ವರ್ಷ ವಯಸ್ಸಿವರು ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಆಸಕ್ತಿ ತೋರಿದ್ದಾರೆ. ಈ ಕರಿತು ಟ್ವೀಟ್ ಮಾಡಿರೋ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಬೆಂಗಳೂರುರಿನ ಪ್ರತಿಯೊಬ್ಬ ನಾಗರೀಕರ ¨ಗ್ಗೆ ಹೆಮ್ಮೆ ಆಗ್ತಿದೆ ಎಂದು ಹೇಳಿದ್ದಾರೆ.
ಪೊಲೀಸರ ಜೊತೆ ಕೆಲಸ ಮಾಡಲು ಅದ್ಭುತ ರೆಸ್ಪಾನ್ಸ್
Please follow and like us: